Daily Horoscope
✕

ಸೈನಾ ನೆಹ್ವಾಲ್ ಗೆ ಪತ್ರ ಬರೆದು ಬೇಷರತ್ ಕ್ಷಮೆ ಯಾಚಿಸಿದ ನಟ ಸಿದ್ಧಾರ್ಥ್

Webdunia
ಬುಧವಾರ, 12 ಜನವರಿ 2022 (09:28 IST)
ಹೈದರಾಬಾದ್: ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡುವಾಗ ಕೀಳು ಮಟ್ಟದ ಕಾಮೆಂಟ್ ಮಾಡಿ ಟೀಕೆಗೊಳಗಾಗಿದ್ದ ನಟ ಸಿದ್ಧಾರ್ಥ್ ಈಗ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ ಪತ್ರ ಮುಖೇನ ಬೇಷರತ್ ಕ್ಷಮೆ ಯಾಚಿಸಿದ್ದಾರೆ.

ಸೈನಾ ಬಗ್ಗೆ ಕಾಕ್ ಚಾಂಪಿಯನ್ ಎಂದು ಕೆಟ್ಟ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದ ಸಿದ್ಧಾರ್ಥ್ ವಿರುದ್ಧ ಸ್ವತಃ ಮಹಿಳಾ ಆಯೋಗ ಸಿಡಿದೆದ್ದಿತ್ತು. ಪುರುಷರ ಗುಪ್ತಾಂಗಕ್ಕೆ ಹೋಲಿಸಿ ಸೈನಾಗೆ ಕಾಮೆಂಟ್ ಮಾಡಿ ಟೀಕಗೊಳಗಾಗಿದ್ದ ಸಿದ್ಧಾರ್ಥ್ ಈಗ ಕ್ಷಮೆ ಯಾಚಿಸಿದ್ದಾರೆ.

‘ಡಿಯರ್ ಸೈನಾ, ನನ್ನ ಜೋಕ್ ಬಗ್ಗೆ ಕ್ಷಮೆ ಯಾಚಿಸುತ್ತೇನೆ. ಕೆಲವು ದಿನಗಳ ಹಿಂದೆ ನೀವು ಮಾಡಿದ ಟ್ವೀಟ್ ನನಗೆ ಕೋಪ ತರಿಸಿರಬಹುದು. ಆದರೆ ಅದಕ್ಕೆ ನಾನು ಪ್ರತಿಕ್ರಿಯಿಸಿದ ರೀತಿಯಿಂದ ನಿಮಗೆ ಬೇಸರವಾಗಿದ್ದರಿಂದ ಕ್ಷಮೆ ಯಾಚಿಸುತ್ತೇನೆ. ನನಗೆ ಮಹಿಳೆಯರ ಮೇಲೆ ಅಪಾರವಾದ ಗೌರವವಿದೆ. ಈ ಜೋಕ್ ಮಾಡುವ ಮೂಲಕ ಮಹಿಳೆಯಾಗಿ ನಿಮ್ಮ ಮೇಲೆ ಆಕ್ರಮಣ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಈ ಪತ್ರವನ್ನು ಸ್ವೀಕರಿಸಿ ಕ್ಷಮೆ ಸ್ವೀಕರಿಸಿ. ನೀವು ಯಾವತ್ತೂ ನನ್ನ ಪಾಲಿಗೆ ಚಾಂಪಿಯನ್’ ಎಂದು ಸಿದ್ಧಾರ್ಥ್ ಸುದೀರ್ಘವಾಗಿ ಪತ್ರ ಬರೆದು ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಕ್ಸಸ್ ಅಂದ್ರೆ ಹೀಗಿರ್ಬೇಕು…ಪ್ರೇಮದ ಊರಲಿ ಸಿನಿಮಾ 100 ಕೋಟಿ ಕ್ಲಬ್ ಗೆ ಸೇರ್ಪಡೆ

BBK13: ಗೆಳೆಯ ಎನ್ನುತ್ತಲೇ ತಾಂಡವ್ ಬೆನ್ನಿಗೆ ಚೂರಿ ಹಾಕಿದ್ರಾ ಗಗನ್… ಕಣ್ಣೀರಾದ ಕುಚಿಕು

ಬೇಗ ಓಡು ಟೈಗರ್…ಪ್ರಾಣದ ಹಂಗು ತೊರೆದು ಚಾಲಕನ ಜೀವ ಉಳಿಸಿದ ಟೈಗರ್ ಶ್ರಾಫ್: Video

ಕಣ್ಮುಚ್ಚಿ ಹೊಡೆಯುವಷ್ಟರಲ್ಲಿ ತೀರಾ ಸನಿಹದಿಂದಲೇ ಬಿತ್ತು ಗುಂಡು: ಟೈಗರ್ ಶ್ರಾಫ್ ಗುಂಡಿನ ದಾಳಿಯ ಭೀಕರ ವಿಡಿಯೋ ವೈರಲ್

BBK13: ಒಂದು ಸೀಸನ್ ನಲ್ಲಿ ಒಬ್ರು ಇಬ್ರು ದಡ್ಡರಿದ್ರೆ ಓಕೆ, ಇಷ್ಟೂ ಇಲ್ವಾ ತಲೆಯಲ್ಲಿ: ಮನೆಮಂದಿಗೆ ಕಿಚ್ಚನ ಕ್ಲಾಸ್

ಮುಂದಿನ ಸುದ್ದಿ
Show comments