ದಯಮಾಡಿ ಭಯ ಹುಟ್ಟಿಸಬೇಡಿ: ನಟ ಜೆಕೆ ಮನವಿ

Webdunia
ಬುಧವಾರ, 21 ಏಪ್ರಿಲ್ 2021 (09:46 IST)
ಬೆಂಗಳೂರು: ಈಗ ಎಲ್ಲಿ ನೋಡಿದರೂ ಕೊರೋನಾದ್ದೇ ಸುದ್ದಿ. ಇದರಿಂದಾಗಿ ಜನರಲ್ಲಿ ಮನೆಯಿಂದ ಹೊರಗೆ ಬರಲೂ ಭಯ ಉಂಟಾಗಿದೆ. ಆದರೆ ದಯವಿಟ್ಟು ಭಯ ಹುಟ್ಟಿಸುವ ಕೆಲಸ ಮಾಡಬೇಡಿ ಎಂದು ನಟ ಜಕೆ ಮನವಿ ಮಾಡಿದ್ದಾರೆ.


ಕೊರೋನಾ ಕುರಿತಾಗಿ ಕಾಳಜಿ ವಹಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿರುವ ಜೆಕೆ, ಕಾಳಜಿ ಇರಲಿ, ಆದರೆ ಭಯ ಹುಟ್ಟಿಸುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಕೆಲವು ಸುದ್ದಿಗಳನ್ನು ನೋಡುತ್ತಿದ್ದರೆ ನಮ್ಮ ಮನೆಯಲ್ಲೂ ಅಪ್ಪ-ಅಮ್ಮನಿಗೂ ಆತಂಕ ಶುರುವಾಗಿದೆ. ಸಾಧ್ಯವಾದರೆ ಇನ್ನೊಬ್ಬರಿಗೂ ಸಕಾರಾತ್ಮಕವಾಗಿರಲು ತಿಳಿಸೋಣ. ಇಂತಹ ಹಲವು ರೋಗಗಳೊಂದಿಗೆ ನಾವು ಸುದೀರ್ಘ ಕಾಲದಿಂದ ಹೋರಾಡುತ್ತಲೇ ಬಂದಿದ್ದೇವೆ. ಆದಷ್ಟು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸ್ ಮಾಡುತ್ತಾ ಫಿಟ್ ಆಗಿರುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸೋಣ. ಜನಗಳೇ, ದಯವಿಟ್ಟು ಯಾರೂ ಭಯಪಡಬೇಡಿ. ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ. ಇನ್ನೊಬ್ಬರಿಗೂ ಜವಾಬ್ಧಾರಿಯುತ ವ್ಯಕ್ತಿಗಳಾಗಿ ತಿಳಿ ಹೇಳೋಣ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೊಡ್ಡ ಸ್ಟಾರ್ ಆದ್ರೂ ಬಾಲಿವುಡ್‌ನಲ್ಲಿ ತನಗಾದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ಮೊನ್ನೆ ದೈವದ ಅನುಕರಣೆ, ಇಂದು ಜನರಲ್ಲಿ ಕ್ಷಮೆಯಾಚಿಸಿದ ರಣವೀರ್ ಸಿಂಗ್

ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕೊನೆಗೂ ಕ್ಷಮೆ ಕೇಳಿದ ರಣವೀರ್ ಸಿಂಗ್

ಸಮಂತಾ ರುತ್ ಪ್ರಭು ಕೈಹಿಡಿದ ರಾಜ್ ನಿಡಿಮೋರು ಬಗ್ಗೆ ತಿಳಿದಿರದ ಇನ್ನಷ್ಟು ಮಾಹಿತಿ

ಸಮಂತಾ ಜತೆಗೆ ಮದುವೆ ಬೆನ್ನಲ್ಲೇ ರಾಜ್ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಮುಂದಿನ ಸುದ್ದಿ
Show comments