ಕೆಲವೇ ಕ್ಷಣಗಳಲ್ಲಿ ನಟ ದರ್ಶನ್‌ ಬಿಡುಗಡೆ ಸಾಧ್ಯತೆ: ಜೈಲು ಸುತ್ತಾಮುತ್ತಾ ಹೆಚ್ಚಿಸಿದ ಭದ್ರತೆ

sampriya
ಬುಧವಾರ, 30 ಅಕ್ಟೋಬರ್ 2024 (16:54 IST)
photo credit X
ಬಳ್ಳಾರಿ: ಬರೋಬ್ಬರಿ ೧೩೧ ದಿನಗಳ ಬಳಿಕ ನಟ ದರ್ಶನ್‌ ಅವರು ಇಂದು ಬಳ್ಳಾರಿ ಜೈಲಿನಿಂದ ರಿಲೀಸ್‌ ಆಗುತ್ತಿದ್ದಾರೆ. ಈಗಾಗಲೇ ಜಾಮೀನು ಪ್ರತಿಯನ್ನು ಸುಶಾಂತ್‌ ನಾಯ್ಡು ಅವರು ಪೊಲೀಸರ ಕೈಗೆ ನೀಡಿದ್ದು, ಕೆಲವೇ ಕ್ಷಣಗಳಲ್ಲಿ ದರ್ಶನ್‌ ಬಿಡುಗಡೆಯಾಗಲಿದ್ದಾರೆ.

ಇನ್ನೂ ಬಿಡುಗಡೆ ಹಿನ್ನೆಲೆ ಜೈಲಿನ ಸುತ್ತಾಮತ್ತಾ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಅಭಿಮಾನಿಗಳನ್ನು ಮತ್ತು ಜನಸಂದಣಿ ನಿಯಂತ್ರಿಸಲು ಜಿಲ್ಲಾ ಪೊಲೀಸ್‌ ಇಲಾಖೆ ಬಳ್ಳಾರಿ ಕೇಂದ್ರ ಕಾರಾಗೃಹದ ಬಳಿ ಭದ್ರತೆ ಹೆಚ್ಚಿಸಲಾಗಿದೆ.

ಬಳ್ಳಾರಿ ಜೈಲಿಗೆ ತೆರಳಲು ಎರಡು ಕಡೆಗಳಿಂದ ಪ್ರವೇಶವಿದೆ. ಒಂದು ದುರ್ಗಮ್ಮನ ಗುಡಿ ಕಡೆಯಿಂದ ಮತ್ತೊಂದು ಎಸ್‌ಪಿ ವೃತ್ತದಿಂದ. ಈ ಎರಡೂ ಪ್ರವೇಶಗಳನ್ನು ಪೊಲೀಸರು ಬ್ಯಾರಿಕೇಡ್‌ ಹಾಕಿ ಸಂಚಾರ ನಿರ್ಬಂಧಿಸಿದರು.  

ತೀರ ಅಗತ್ಯವಿದ್ದವರಿಗಷ್ಟೇ ಈ ಮಾರ್ಗದಲ್ಲಿ ನಡೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಅಭಿಮಾನಿಗಳು, ಅನಗತ್ಯವಾಗಿ ಈ ಮಾರ್ಗವಾಗಿ ಓಡಾಡುವವರನ್ನು ಪೊಲೀಸರು ತಡೆಯುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments