Daily Horoscope
✕

ಡೆವಿಲ್ ಶೂಟಿಂಗ್‌ನಲ್ಲಿರುವ ನಟ ದರ್ಶನ್‌ಗೆ ಮುಗಿಯದ ಸಂಕಷ್ಟ

Sampriya
ಬುಧವಾರ, 2 ಏಪ್ರಿಲ್ 2025 (17:40 IST)
Photo Courtesy X
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 7ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಕೋರಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು  ಏಪ್ರಿಲ್22ಕ್ಕೆ ಮುಂದೂಡಿದೆ.

ನಟ ದರ್ಶನ್ ಸೇರಿದಂತೆ ಇತರ ಆರೋಪಗಳಿಗೆ ನೀಡಿದ ಜಾಮೀನು ಅರ್ಜಿಯನ್ನು ರದ್ದುಕೋರಿ  ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.  

ದರ್ಶನ ಪರ ವಕೀಲರು ಕೌಂಟರ್ ಅಫಿಡವಿಟ್ ಸಲ್ಲಿಕೆಗೆ ಸಮಯವಕಾಶ ಕೇಳಿದ್ದು, ಸಾಕಷ್ಟು ಫೈಲ್‌ಗಳನ್ನು ತರ್ಜುಮೆ ಮಾಡಬೇಕಿದೆ. ಜೊತೆಗೆ ಎಲ್ಲ ಆರೋಪಗಳಿಗೆ ಉತ್ತರ ಸಲ್ಲಿಸಬೇಕಿದೆ. ಅದಕ್ಕಾಗಿ ಎರಡು ವಾರಗಳ ಕಾಲಾವಕಾಶ ಕೇಳಿದ್ದರು. ಹೀಗಾಗಿ ಏ.22 ರಂದು ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿದೆ.

ಇದಕ್ಕೂ ಮುನ್ನ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಮಾ.18ಕ್ಕೆ ನಡೆಯಬೇಕಿತ್ತು. ವಿಚಾರಣೆಗೆ ಪಟ್ಟಿಯಾಗದ ಹಿನ್ನೆಲೆ ದರ್ಶನ್ ಪ್ರಕರಣದಲ್ಲಿನ ರಾಜ್ಯದ ವಿಶೇಷ ವಕೀಲ ಅನಿಲ್ ನಿಶಾನಿ ಅರ್ಜಿ ವಿಚಾರಣೆ ನಡೆಸುವಂತೆ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಕೋರ್ಟ್ ಏ.2 ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿತ್ತು.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚಾನೆಲ್ ನವರೇ ಹೇಳಿದ್ದಕ್ಕೆ ಅಂಥಾ ಬಟ್ಟೆ ಹಾಕಿದ್ದೆ: ಬಿಗ್ ಬಾಸ್ ನಿಂದ ಹೊರ ಬಂದ ಕುಮಾರಿ ಹೇಳಿಕೆ ಈಗ ವೈರಲ್ Video

BBK13: ಕಿಚ್ಚ ಸುದೀಪ್ ಹೇಳಿದ್ದು ನಿಜವಾಯ್ತು ಈ ವಾರ ಸ್ನೇಹಿತರ ನಡುವೆಯೇ ಧಗ ಧಗ

ದರ್ಶನ್ ಬೆನ್ನುನೋವು ಮತ್ತೆ ತೀವ್ರ: ಪರಪ್ಪನ ಅಗ್ರಹಾರ ಜೈಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಆರಂಭ

ಗಂಡನಿಗಾಗಿ ಕೂದಲು ಬೋಳಿಸಿದ್ರು, ಚಪ್ಪಲಿ ಕೈಯಲ್ಲಿ ಹಿಡಿದಿದ್ರು.. ಪವನ್ ಕಲ್ಯಾಣ್, ಪತ್ನಿ ವಿಚ್ಛದನ: ಹಳೇ ವಿಡಿಯೋ ವೈರಲ್

BBK13: ಮಂಜನಿಗೆ ಸಿಕ್ಕ ನ್ಯಾಯ ಬೇರೆಯವರಿಗೆ ಯಾಕಿಲ್ಲ: ಬಿಗ್ ಬಾಸ್ ವಿರುದ್ಧ ಪ್ರೇಕ್ಷಕರ ಆಕ್ರೋಶ

ಮುಂದಿನ ಸುದ್ದಿ
Show comments