ನಟ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ ಲೊಕೇಷನ್ ವಿಡಿಯೋ ಲೀಕ್

Krishnaveni K
ಮಂಗಳವಾರ, 26 ಮಾರ್ಚ್ 2024 (09:09 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಡೆವಿಲ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಇದೀಗ ಲೊಕೇಷನ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.

ಕಾಟೇರ ಸಿನಿಮಾ ಸಕ್ಸಸ್ ಬಳಿಕ ದರ್ಶನ್ ನಾಯಕರಾಗಿ ನಟಿಸುತ್ತಿರುವ ಸಿನಿಮಾ ಡೆವಿಲ್. ಈ ಸಿನಿಮಾದ ಮುಹೂರ್ತ ಕಳೆದ ವರ್ಷ ಕೊನೆಯಲ್ಲಿ ನಡೆದಿತ್ತು. ಇದೀಗ ಕಾಟೇರ ಸಕ್ಸಸ್ ಬಳಿಕ ಕೆಲವು ದಿನ ಬ್ರೇಕ್ ತೆಗೆದುಕೊಂಡು ದರ್ಶನ್ ಹೊಸ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿಯೇ ಮೊದಲ ಹಂತದ ಶೂಟಿಂಗ್ ನಡೆಯುತ್ತಿದೆ. ರಾಕ್ ಲೈನ್ ಸ್ಟುಡಿಯೋದಲ್ಲಿ ವಿಶೇಷ ಸೆಟ್ ಹಾಕಲಾಗಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಸಿನಿಮಾದ ಲೊಕೇಷನ್ ವಿಡಿಯೋವೊಂದು ಹರಿದಾಡುತ್ತಿದೆ. ಡೆವಿಲ್ ಸಿನಿಮಾಗಾಗಿ ವಿಶೇಷ ಸೆಟ್ ಹಾಕಿರುವುದು ಇದರಲ್ಲಿ ಕಂಡುಬರುತ್ತಿದೆ.

ಮಿಲನ ಸಿನಿಮಾ ಖ್ಯಾತಿಯ ಪ್ರಕಾಶ್ ವೀರ್ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದ್ದು, ಔಟ್ ಆಂಡ್ ಔಟ್ ಮಾಸ್ ಕತೆಯನ್ನೊಳಗೊಂಡಿದೆ. ಈಗಾಗಲೇ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದ್ದು, ದರ್ಶನ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಒಂದೇ ಒಂದು ಪೋಸ್ಟ್ ನಿಂದ ಗಂಡನ ಜೊತೆಗಿಲ್ವಾ ಎಂದವರಿಗೆ ಉತ್ತರ ಕೊಟ್ಟ ನಟಿ ಭಾವನಾ ಮೆನನ್

ಮದುವೆ ಖುಷಿಯಲ್ಲಿರುವ ಉಗ್ರಂ ಮಂಜು ಅರಿಶಿನ ಶಾಸ್ತ್ರದಲ್ಲಿ ಮಸ್ತ್‌ ಡ್ಯಾನ್ಸ್‌, Video

ಊರಿಗೆ ಬಂದ ಬಿಗ್ ಬಾಸ್ ರಕ್ಷಿತಾ ಶೆಟ್ಟಿಗೆ ಅಭಿಮಾನಿ ಇಂಥಾ ಗಿಫ್ಟ್ ಕೊಡುದಾ... Video

ರಿಯಾಲಿಟಿ ಶೋ ಸೆಟ್ ನಲ್ಲೇ ಪುಟಾಣಿ ಜೊತೆ ಹೀಗೆ ಮಾಡಿದ್ರು ಶಿವಣ್ಣ: Viral video

ಸುಷ್ಮಾ ರಾವ್ ಒಂಟಿ ಅನ್ಕೊಂಡ್ಬಿಟ್ಟಿದ್ವಿ, ಪತಿ ಮಗನನ್ನು ಪರಿಚಯಿಸಿ ಶಾಕ್ ಕೊಟ್ಟ ಸುಷ್ಮಾ ರಾವ್

ಮುಂದಿನ ಸುದ್ದಿ
Show comments