Select Your Language

Notifications

webdunia
webdunia
webdunia
webdunia

ಹಿರಿಯ ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಈಗ ಉಬರ್ ಡ್ರೈವರ್!

ಹಿರಿಯ ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಈಗ ಉಬರ್ ಡ್ರೈವರ್!
ಬೆಂಗಳೂರು , ಶನಿವಾರ, 30 ಡಿಸೆಂಬರ್ 2017 (10:08 IST)
ಬೆಂಗಳೂರು: ಹಿರಿಯ ನಟ ಅಶ್ವತ್ಥ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ? ಹಳೆಯ ಕನ್ನಡ ಸಿನಿಮಾಗಳಲ್ಲಿ ತಂದೆಯ ಪಾತ್ರ ನಿರ್ವಹಿಸುತ್ತಿದ್ದ ಹಿರಿಯ ನಟನನ್ನು ಕಂಡರೆ ನಮ್ಮ ತಂದೆಯನ್ನು ಕಂಡಷ್ಟೇ ಗೌರವ ಮೂಡುತ್ತಿತ್ತು.
 

ಅಂತಹ ಮಹಾನ್ ನಟನ ಪುತ್ರ ಶಂಕರ್ ಅಶ್ವತ್ಥ್ ಕೂಡಾ ಕೆಲವು ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದವರೇ. ಆದರೆ ಇಂದು ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾದ ಕಾರಣಕ್ಕೆ ಉಬರ್ ಕ್ಯಾಬ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ವಾಭಿಮಾನದ ಬದುಕಿಗಾಗಿ ಬೇರೆ ದಾರಿ ಕಾಣದೆ ಉಬರ್ ಕ್ಯಾಬ್ ಚಾಲಕ ವೃತ್ತಿಗೆ ಸೇರಿಕೊಂಡಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ. ಸ್ವಾಭಿಮಾನದಿಂದ ಬದುಕಲು ಯಾವ ವೃತ್ತಿಯಾದರೇನು ಎಂಬ ತಂದೆಯ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಇದರಲ್ಲಿ ನನಗೆ ಯಾವುದೇ ಬೇಸರವಿಲ್ಲ. ಸ್ವಾಭಿಮಾನದಿಂದ ಬದುಕಲು ಯಾವ ವೃತ್ತಿಯಾದರೇನು ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ತಾವು ಉಬರ್ ಚಾಲಕರಾಗಿ ಕೆಲಸ ಮಾಡುವಾಗ ಹಲವು ಜನ ಪ್ರಯಾಣಿಕರು ತಮ್ಮನ್ನು ಗುರುತಿಸುತ್ತಾರೆ. ಅಶ್ವತ್ಥ್ ಮಗ ಎಂದು ಪ್ರೀತಿಯಿಂದ ಮಾತನಾಡಿಸುತ್ತಾರೆ. ತುಂಬಾ ಖುಷಿಯಾಗುತ್ತದೆ ಎಂದು ಶಂಕರ್ ಅಶ್ವತ್ಥ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾವಿ ಮಡದಿ ರಶ್ಮಿಕಾ ನೋಡಿ ರಕ್ಷಿತ್ ಶೆಟ್ಟಿ ಹೊಗಳಿದ್ದೇ ಹೊಗಳಿದ್ದು!