ಹೈದರಾಬಾದ್ : ಪುಷ್ಪಾ ಚಿತ್ರದ ಚಿತ್ರೀಕರಣ ಮುಗಿದ ಬಳಿಕ ನಟ ಅಲ್ಲು ಅರ್ಜುನ್ ತಮ್ಮ ತಂದೆ , ನಿರ್ಮಾಪಕ ಅಲ್ಲು ಅರವಿಂದ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪುಷ್ಪಾ ಚಿತ್ರದ ಬಳಿಕ ಅಲ್ಲು ಅರ್ಜುನ್ ಅವರು ಕೊರಟಾಲ ಶಿವ ಅವರೊಂದಿಗೆ ಚಿತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಕೊರಟಾಲ ಶಿವ ಜೂನಿಯರ್ ಎನ್ ಟಿಆರ್ ಅವರೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದರು.
ಹಾಗಾಗಿ ಅಲ್ಲು ಅರ್ಜುನ್ ಅವರು ತಮ್ಮ ತಂದೆಯ ಜೊತೆ ಚಿತ್ರ ಮಾಡಲು ಹೊರಟಿದ್ದು, ಈ ಯೋಜನೆಯನ್ನು ನಿಭಾಯಿಸಲು ಸಮರ್ಥ ನಿರ್ದೇಶಕರನ್ನು ಹುಡುಕುತ್ತಿದ್ದಾರೆ. ಮತ್ತು ಅಲ್ಲು ಅರವಿಂದ್ ಅವರು ತಮ್ಮ ಮಗನಿಗಾಗಿ ತಮಿಳು ಚಿತ್ರ ತಯಾರಕ ಎ.ಆರ್.ಮುರುಗದಾಸ್ ಅವರ ಜೊತೆ ಸೇರಲಿದ್ದಾರೆ ಎನ್ನಲಾಗಿದೆ.