Webdunia - Bharat's app for daily news and videos

Install App

ಸು ಫ್ರಮ್ ಸೋ ಸಿನಿಮಾ ನೋಡಿ ನಿರ್ದೇಶಕನಿಗೆ ಭೇಟಿಗೆ ಆಹ್ವಾನಿಸಿದ ಬಾಲಿವುಡ್‌ನ ಖ್ಯಾತ ನಟ

Sampriya
ಮಂಗಳವಾರ, 12 ಆಗಸ್ಟ್ 2025 (16:41 IST)
Photo Credit X
ಬೆಂಗಳೂರು: ₹5.50 ಕೋಟಿ ಬಜೆಟ್‌ನಲ್ಲಿ ಸದ್ದಿಲ್ಲದೆ ಬಿಡುಗಡೆಯಾಗಿ ಇದೀಗ ರಾಜ್ಯದ ಗಡಿಯಾಚೆಗೂ ಕನ್ನಡದ ಸು ಫ್ರಮ್ ಸೋ ಸಿನಿಮಾಗೆ ಬಾಲಿವುಡ್ ನಟ ಅಜಯ್ ದೇವಗನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಲ್ಲದೆ ಸಿನಿಮಾ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದ್ದು, ಅದರಂತೆ ಅವರನ್ನು ಭೇಟಿಯಾಗಿದ್ದೇವೆ ಎಂದು ಜೆಪಿ ತುಮ್ಮಿನಾಡ್ ಹೇಳಿಕೊಂಡಿದ್ದಾರೆ. 

ಈ ವಿಚಾರವನ್ನು ನಿರ್ದೇಶಕ ಜೆಪಿ ತುಮ್ಮಿನಾಡ್ ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಜಯ್ ದೇವಗನ್ ಭೇಟಿಯ ಪೋಟೋವನ್ನು ಹಂಚಿಕೊಂಡು ವಿಷಯವನ್ನು ಹೇಳಿಕೊಂಡಿದ್ದಾರೆ. 

ಅಜಯ್ ದೇವಗನ್ ಅವರು ನಮ್ಮ ಸು ಫ್ರಮ್ ಸೋ ಚಿತ್ರವನ್ನು ಇಷ್ಟಪಟ್ಟರು ಮತ್ತು ಅದರ ಬಗ್ಗೆ ಮಾತನಾಡಲು ನಮ್ಮನ್ನು ಆಹ್ವಾನಿಸಿದರು. ಅವರು ನಿಜವಾಗಿಯೂ ಎಂತಹ ಅದ್ಭುತ ವ್ಯಕ್ತಿತ್ವವನ್ನು ಹೊಂದಿದ್ದಾರೆಂದು ತೋರಿಸಿದರು. ಮಹಾನ್ ಅಜಯ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಗೌರವ ಮತ್ತು ಪ್ರೀತಿ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. 

ಜೆಪಿ ತುಮ್ಮಿನಾಡ್ ನಟಿಸಿ, ನಿರ್ದೇಶಿಸಿರುವ ಸು ಫ್ರಮ್ ಸೋ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿ ಇದೀಗ 100ಕೋಟಿ ಕ್ಲಬ್‌ನತ್ತ ಸಿನಿಮಾ ಸಾಗಿದೆ. ಈ ಸಿನಿಮಾಗೆ ನಟ ರಾಜ್‌ ಬಿ ಶೆಟ್ಟಿ,  ಶಶಿಧರ್‌ ಶೆಟ್ಟಿ ಬರೋಡಾ, ರವಿ ರೈ ಕಳಸ ಬಂಡವಾಳ ಹೂಡಿದ್ದಾರೆ. 

ರಾಜ್‌ ಬಿ ಶೆಟ್ಟಿ ಅವರು ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದು, ಅವರ ಅಭಿನಯ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೂಲಿ ಸಿನಿಮಾ ಟಿಕೆಟ್ ದರ ಯದ್ವಾ ತದ್ವಾ ಏರಿಕೆ: ಕೇಳೋರೇ ಇಲ್ಲ

ನಟ ಧನುಷ್ ಜತೆ ಡೇಟಿಂಗ್ ವದಂತಿ, ಕೊನೆಗೂ ಮೌನ ಮುರಿದ ಮೃಣಾಲ್ ಠಾಕೂರ್‌

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಹಿರಿಯ ನಟಿ ಜಯಾ ಬಚ್ಚನ್ ಹೀಗೇ ನಡೆಸಿಕೊಳ್ಳುವುದಾ, ವಿಡಿಯೋ ವೈರಲ್

ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆ ಬೆನ್ನಲ್ಲೇ ಸೆಷನ್ಸ್‌ ಕೋರ್ಟ್‌ ವಿಚಾರಣೆಗೆ ಹಾಜರಾದ ದರ್ಶನ್‌, ಪವಿತ್ರಾ

ಮುಂದಿನ ಸುದ್ದಿ
Show comments