Publish Date: Fri, 26 Dec 2025 (16:44 IST)
Updated Date: Fri, 26 Dec 2025 (16:46 IST)
ಬೆಂಗಳೂರು: 45 ಸಿನಿಮಾ ರಿಲೀಸ್ ಆದ ಮರುದಿನವೇ ಈ ಗತಿ ಎಂದರೆ ನಾವು ನಿರ್ಮಾಪಕರು ಎಲ್ಲಿಗೆ ಹೋಗೋಣ ಎಂದು ನಿರ್ಮಾಪಕ ರಮೇಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಬಹುತೇಕ ಬಿಗ್ ಸ್ಟಾರ್ ಸಿನಿಮಾಗಳಿಗೆ ಕಾಡುತ್ತಿರುವ ಸಮಸ್ಯೆ ಪೈರಸಿ. ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್ ಲೈನ್ ಗಳಲ್ಲಿ ಪೈರಸಿ ಕಾಪಿ ಹರಿದಾಡುತ್ತದೆ. ಇದರಿಂದ ಚಿತ್ರದ ಆದಾಯಕ್ಕೆ ದೊಡ್ಡ ಹೊಡೆತ ನೀಡುತ್ತಿದೆ.
ಇದೇ ವಿಚಾರವಾಗಿ ಇಂದು ಮಾಧ್ಯಮಗೋಷ್ಠಿಯಲ್ಲಿ 45 ನಿರ್ಮಾಪಕ ರಮೇಶ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿ ಕಷ್ಟಪಟ್ಟು ಸಿನಿಮಾ ಮಾಡಿರ್ತೇವೆ. ಆದರೆ ರಿಲೀಸ್ ಆದ ಮರುದಿನಕ್ಕೇ ಪೈರಸಿಯಾಗಿದೆ.
ನನಗೇ ಎರಡು-ಮೂರು ಲಿಂಕ್ ಬಂದಿದೆ. ಹೀಗಾದರೆ ನಿರ್ಮಾಪಕರು ಎಲ್ಲಿಗೆ ಹೋಗಬೇಕು? ಪೈರಸಿ ಮಾಡುವುದರಿಂದ ಗಳಿಕೆ ಮೇಲೆ ಹೊಡೆತ ಬೀಳುತ್ತಿದೆ. ಜನ ಥಿಯೇಟರ್ ಗೆ ಬರಲ್ಲ. ಇದು ಕಷ್ಟಪಟ್ಟು ಸಿನಿಮಾ ಮಾಡಿದರೆ ತುಂಬಾ ತೊಂದರೆ ಕೊಡುತ್ತಿದೆ. ನಾವು ಈಗಾಗಲೇ ಕೋರ್ಟ್ ನಿಂದ ಆರ್ಡರ್ ತಂದಿದ್ದೇವೆ. ಯಾರೆಲ್ಲಾ ಪೈರಸಿ ಮಾಡ್ತಿರೋ ಮುಂದಿನ ದಿನಗಳಲ್ಲಿ ಖಂಡಿತಾ ಅವರ ವಿರುದ್ಧ ಕಾನೂನು ಕ್ರಮವಾಗುತ್ತದೆ ಎಂದಿದ್ದಾರೆ.