Select Your Language

Notifications

webdunia
webdunia
webdunia
webdunia

ಸೋನಿಯಾ ಗಾಂಧಿ ಪ್ರಾಯದ ದಿನಗಳಲ್ಲಿ ಡರ್ಟಿ ಜೋಕ್ ಮಾಡಿದ್ಯಾರು?

ಸೋನಿಯಾ ಗಾಂಧಿ ಪ್ರಾಯದ ದಿನಗಳಲ್ಲಿ ಡರ್ಟಿ ಜೋಕ್ ಮಾಡಿದ್ಯಾರು?
Bangalore , ಶುಕ್ರವಾರ, 2 ಡಿಸೆಂಬರ್ 2016 (11:13 IST)
ವಿವಾದಾತ್ಮಕ ನಿರ್ದೇಶಕ ಎಂದು ಕರೆಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಮತ್ತೆ ಟ್ವಿಟ್ಟರ್‌ಗೆ ವಾಪಸ್ ಆಗಿದ್ದಾರೆ. ಅವರು ಮತ್ತೆ ವಾಪಸ್ ಬಂದಿದ್ದಾರೆ ಎಂದರೆ ಏನೋ ಭಾರಿ ವಿಚಾರವೇ ಇರಬೇಕಲ್ಲಾ? ಖಂಡಿತ ಇದೆ. ಅದೂ ಈ ಬಾರಿ ಮೂವರು ಮಾಜಿ ಪ್ರಧಾನಿಗಳನ್ನ ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ.
 
ಸೋನಿಯಾ ಗಾಂಧಿ ಅವರು ಆಗಿನ್ನೂ ಪ್ರಾಯದಲ್ಲಿದ್ದ ದಿನಗಳು. ಆಗ ಅವರ ಹಿಂದೆ ಕೂತಿರುವ ವಯಸ್ಸಾದ ಈ ಮೂವರು ಅವರ ಬೆನ್ನನ್ನು ನೋಡುತ್ತಾ ಮುಸಿಮುಸಿ ನಗುತ್ತಿರುವ ಫೋಟೋಗಳನ್ನು ಹಾಕಿ ಮಜಾ ತಗೊಂಡಿದ್ದಾರೆ ರಾಮು. ಆ ಮಾಜಿ ಪ್ರಧಾನಿಗಳು ಬೇರಾರು ಅಲ್ಲ ಅಟಲ್ ಬಿಹಾರಿ ವಾಜಪೇಯಿ, ಪಿವಿ ನರಸಿಂಹರಾವ್ ಮತ್ತು ಚಂದ್ರಶೇಖರ ಸಿಂಗ್. 
 
ಈ ಬಗ್ಗೆ ಟ್ವಿಟ್ವರ್‌ನಲ್ಲಿ ಒಂದರ ಹಿಂದೆ ಒಂದು ಬಾಣ ಬಿಡುತ್ತಾ ಫೋಟೋಗಳನ್ನು ತೇಲಿಬಿಟ್ಟು ಮಾಜಿ ಪ್ರಧಾನಿಗಳ ಬಣ್ಣ ಬಯಲು ಮಾಡಿದ್ದಾರೆ ವರ್ಮಾ ಸಾಹೇಬರು. "ಬ್ಯಾಕ್ ಬೆಂಚಿನವರು ಸ್ಕೂಲಲ್ಲಾಗಲಿ ಅಥವಾ ಪಾರ್ಲಿಮೆಂಟ್‌ನಲ್ಲಾಗಲಿ ಯಾವಾಗಲೂ ಪೋಲಿಯೇ." ಅಂತ ಟ್ವೀಟಿಸಿ ಮೂವರು ಪ್ರಧಾನಿಗಳ ಈ ಫೋಟೋ ಹರಿಯಬಿಟ್ಟಿದ್ದಾರೆ.
 
ಈ ಚಿತ್ರ ಮಹಿಳೆಯನ್ನು ಕೆಟ್ಟದಾಗಿ ಕಾಣುವ ಮನುಷ್ಯನ ಅಂತರಾಳದ ಮನಸ್ಸಿಗೆ ಕನ್ನಡಿ ಹಿಡಿಯುತ್ತದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು. ಆ ಮೂವರು ಯಾರು ಅಂತ. ಫೋಟೋದಲ್ಲಿರುವ ಮಹಿಳೆ ಯಾರೇ ಆಗಿರಬಹುದು. ಈ ಮೂವರು ಮಾತ್ರ ಡರ್ಟಿ ಜೋಕ್ ಮಾಡ್ತಿರುವ ಬಗ್ಗೆ ತನಿಖೆ ಆಗಲೇಬೇಕು ಅಂದಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉಡುಪಿ ಕಡಲ ಕಿನಾರೆಯಲ್ಲಿ ಓಡಾಡಿದವರು ಯಾರು?