ಕಮಲಹಾಸನ್ ಸಿನಿಮಾ ಸೆಟ್ ನಲ್ಲಿ ದುರ್ಘಟನೆ: ಮೂವರ ಸಾವು

ಗುರುವಾರ, 20 ಫೆಬ್ರವರಿ 2020 (10:17 IST)
ಚೆನ್ನೈ: ಬಹುಭಾಷಾ ತಾರೆ ಕಮಲಹಾಸನ್ ನಟಿಸುತ್ತಿರುವ ಇಂಡಿಯನ್ 2 ಸಿನಿಮಾ ಸೆಟ್ ನಲ್ಲಿ ಸಂಭವಿಸಿದ ದುರ್ಘಟನೆಗೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಇತರ ಒಂಭತ್ತು ಮಂದಿಗೆ ಗಾಯಗಳಾಗಿವೆ.


ಚೆನ್ನೈ ಹೊರವಲಯದಲ್ಲಿರುವ ಇವಿಪಿ ಫಿಲಂ ಸಿಟಿಯಲ್ಲಿ ಇಂಡಿಯನ್ 2 ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸೆಟ್ ನಿರ್ಮಿಸಲು ನಿಲ್ಲಿಸಲಾಗಿದ್ದ ಕ್ರೇನ್ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಒಂಭತ್ತು ಮಂದಿಗೆ ಗಾಯಗಳಾಗಿವೆ.

ತಮ್ಮ ಸೆಟ್ ನಲ್ಲಿ ಸಂಭವಿಸಿದ ದುರ್ಘಟನೆಗೆ ವಿಷಾಧ ವ್ಯಕ್ತಪಡಿಸಿರುವ ನಟ ಕಮಲ್ ಅವರ ಕುಟುಂಬದವರ ಜತೆಗಿರುವುದಾಗಿ ಭರವಸೆ ನೀಡಿದ್ದಾರೆ. ಇಂಡಿಯನ್ 2 ಸಿನಿಮಾ ನಿರ್ಮಾಣ ಮಾಡುತ್ತಿರುವ ಲೈಕಾ ಸಂಸ್ಥೆ ಕೂಡಾ ಸಂತಾಪ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟನಿಗೆ ದರ್ಶನ್ ಮಾಡಿದ ಸಹಾಯ ಎಂಥದ್ದು ಗೊತ್ತೇ?!