ಮುಂಬೈ: ಮಧ್ಯಪ್ರದೇಶದ 19 ನಿಕಿತಾ ಪೋರ್ವಾಲ್ ಅವರು 2024ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ದಾದ್ರಾ ಮತ್ತು ನಗರ ಹವೇಲಿಯ ರೇಖಾ ಪಾಂಡೆ ಮತ್ತು ಗುಜರಾತ್‌ನ ಆಯುಷಿ ಧೋಲಾಕಿಯಾ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿದ್ದಾರೆ. ಮಿಸ್ ಇಂಡಿಯಾ 2024ರ ಅಂತಿಮ ಸುತ್ತಿನ ಸ್ಪರ್ಧೆಯು ಮುಂಬೈನಲ್ಲಿ ನಡೆದಿದೆ.
2023ರ ಮಿಸ್ ಇಂಡಿಯಾ ವಿಜೇತೆ ನಂದಿನಿ ಗುಪ್ತಾ ಅವರು ನಿಕಿತಾ ಅವರಿಗೆ ಕಿರೀಟ ತೊಡಿಸಿದರು. ಮಿಸ್ ವರ್ಲ್ಡ್ ಸ್ಪರ್ಧೆಯ ಮುಂದಿನ ಆವೃತಿಯಲ್ಲಿ ನಿಕಿತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸ್ಪರ್ಧೆಯ ತೀರ್ಪುಗಾರರಾಗಿ ಮಾಜಿ ಸ್ಪರ್ಧಿ ಸಂಗೀತಾ ಬಿಜ್ಲಾನಿ, ನಿಕಿತಾ ಮಹೈಸಲ್ಕರ್, ಅನೀಸ್ ಬಾಜ್ಮಿ, ನೇಹಾ ಧೂಪಿಯಾ, ಬಾಸ್ಕೋ ಮಾರ್ಟಿಸ್ ಮತ್ತು ಮಧುರ್ ಭಂಡಾರ್ಕರ್ ಇದ್ದರು.