ಸಾಲಗಾರರ ಕಾಟ ತಡೆಯಲಾಗದೆ ವರ್ಷದಲ್ಲಿ ಮೂರು ಮನೆ ಬದಲಿಸಿದ್ದ ಗುರುಪ್ರಸಾದ್‌

Sampriya
ಭಾನುವಾರ, 3 ನವೆಂಬರ್ 2024 (14:59 IST)
Photo Courtesy X
ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ಮೂರು ಮನೆಯನ್ನು ಆತ್ಮಹತ್ಯೆಗೆ ಶರಣಾಗಿರುವ ನಿರ್ದೇಶಕ ಗುರುಪ್ರಸಾದ್ ಬದಲಾಯಿಸಿದ್ದರು. ಸಾಲಗಾರರ ಕಾಟ ತಡೆಯಲಾಗದೆ ಈ ರೀತಿ ಮಾಡುತ್ತಿದ್ದರೆ ಎಂಬ ಅನುಮಾನ ವ್ಯಕ್ತವಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್‌ ಅವರ ಶವ ಪತ್ತೆಯಾಗಿದೆ. ಗುರುಪ್ರಸಾದ್‌ ಸಿನಿಮಾ ವಿಚಾರವಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ ಎಂಬ ಮಾತೂ ಹೇಳಿಬರುತ್ತಿದೆ.

ಬಸವೇಶ್ವರನಗರದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಗುರುಪ್ರಸಾದ್ ನಂತರ ಜಯನಗರ ಕನಕನಪಾಳ್ಯದ ಅಶೋಕ್ ಪಿಲ್ಲರ್ ಬಳಿ ವಾಸವಿದ್ದರು. ಕೆಲ ದಿನಗಳ ಕಾಲ ಮನೆ ಬಿಟ್ಟು ಒಬ್ಬಂಟಿಯಾಗಿ ಹೋಟೆಲಿನಲ್ಲಿ ಗುರುಪ್ರಸಾದ್‌ ರೂಂ ಮಾಡಿಕೊಂಡಿದ್ದರು.

ಸದ್ಯ ಕಳೆದ ಕೆಲ ತಿಂಗಳುಗಳಿಂದ ಮಾದನಾಯಕನಹಳ್ಳಿ ಬಳಿಯ ನ್ಯೂ ಹೆವೆನ್ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಮಾದನಾಯಕನಹಳ್ಳಿ ಬಳಿಯ ಫ್ಲಾಟ್ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿಯನ್ನು ಗುರುಪ್ರಸಾದ್‌ ನೀಡಿರಲಿಲ್ಲ.

ಚೆಕ್ ಬೌನ್ಸ್ ಪ್ರಕರಣದಲ್ಲಿ ಗುರುಪ್ರಸಾದ್‌ ಕೋರ್ಟ್‌, ಕಚೇರಿ ಅಲೆಯುತ್ತಿದ್ದರು. ಈ ನಡುವೆ ಜಯನಗರದಲ್ಲಿ ಪುಸ್ತಕ ಖರೀದಿ ಮಾಡಿ ಹಣ ನೀಡಿಲ್ಲ ಎಂಬ ಆರೋಪದ ಅಡಿ ಮತ್ತೊಂದು ಕೇಸ್ ದಾಖಲಾಗಿತ್ತು. ಹೀಗಾಗಿ ಆರ್ಥಿಕವಾಗಿ ಒಂದಷ್ಟು ಸಮಸ್ಯೆಯನ್ನು ಗುರುಪ್ರಸಾದ್ ಎದುರಿಸುತ್ತಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಮುಂದಿನ ಸುದ್ದಿ
Show comments