Select Your Language

Notifications

webdunia
webdunia
webdunia
webdunia

ಸಂಜಯ್ ದತ್ 65ನೇ ಬರ್ತಡೇ: 'ಕೆಡಿ' ಚಿತ್ರತಂಡದಿಂದ ವಿಶೇಷ ಉಡುಗೊರೆ

ಸಂಜಯ್ ದತ್ 65ನೇ ಬರ್ತಡೇ: 'ಕೆಡಿ' ಚಿತ್ರತಂಡದಿಂದ ವಿಶೇಷ ಉಡುಗೊರೆ

Sampriya

ಬೆಂಗಳೂರು , ಸೋಮವಾರ, 29 ಜುಲೈ 2024 (12:20 IST)
Photo Courtesy X
ನಟ ಯಶ್ ನಟನೆಯ ಕೆಜಿಎಫ್ ಸಿನಿಮಾ ಭಾರೀ ಸದ್ದು ಮಾಡಿದ ಬಳಿಕ ಬಾಲಿವುಡ್ ನಟ ಸಂಜಯ್ ದತ್ ಅವರು ಕನ್ನಡದ ಸಿನಿಮಾಗಳಿಗೆ ಪ್ರಾಮುಖ್ಯತೆ ನೀಡಿ ಅಭಿನಯಿಸುತ್ತಿದ್ದಾರೆ. ಇದೀಗ ಜೋಗಿ ಪ್ರೇಮ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ನಟ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದಲ್ಲಿ ಸಂಜಯ್ ದತ್ ಧಕ್ ದೇವಾರಾಗಿ ಅಬ್ಬರಿಸಲಿದ್ದಾರೆ.

ಇಂದು ನಟ ಸಂಜಯ್  ದತ್ ಅವರು 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ ಕೆಡಿ ಚಿತ್ರತಂಡ ಅವರ ಲುಕ್ ರಿವೀಲ್ ಮಾಡಿ ಅವರಿಗೆ ಶುಭಕೋರಿದೆ. ಇನ್ನೂ ಸಂಜಯ್ ದತ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ.  

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಜ್ಜಾಗುತ್ತಿರುವ ಕೆಡಿ ಸಿನಿಮಾದಲ್ಲಿ ಸಂಜಯ್ ದತ್ ಅವರು ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರ ತಂಡ ರಿವೀಲ್ ಮಾಡಿದ ಲುಕ್‌ನಲ್ಲಿ ಸಂಜಯ್ ಅವರು  ತಲೆಗೆ ಪೊಲೀಸ್ ಹ್ಯಾಟ್ ಧರಿಸಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ರೇಶ್ಮಾ ನಾನಯ್ಯ ಅವರು ಜೋಡಿಯಾಗಿ ಅಭಿನಯಿಸಲಿದ್ದಾರೆ. ಇನ್ನು ಬಾಲಿವುಡ್ ಬೆಡಗಿ ಓರಾ ಫಾತಿಹಾ, ಮಂಗಲೂರಿನ ಬೆಡಗಿ ಶಿಲ್ಪಾ ಶೆಟ್ಟಿ, ವಿಜಯ್ ಸೇತುಪತಿ, ರಮೇಶ್ ಅರವಿಂದ್, ವಿ.ರವಿಚಂದ್ರನ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿದೆ.

ಎಲ್ಲವೂ ಅಂದುಕೊಂಡತೆ ನಡೆದರೆ ಇದೇ ನವೆಂಬರ್ ತಿಂಗಳಿನಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಕುಟುಂಬದ ಜತೆಗಿನ ರಾಜಿ ಸಂಧಾನ ನನಗೆ ಬೇಕಾಗಿಲ್ಲ ಎಂದಾ ವಿನೋದ್ ರಾಜ್