Webdunia - Bharat's app for daily news and videos

Install App

ಈ ವಾರ 10 ಸ್ಪರ್ಧಿಗಳು ಎಲಿಮಿನೇಷನ್ ತೂಗುಗತ್ತಿಯಲ್ಲಿ: ವಾರದ ಕತೆಯಲ್ಲಿ ಇರಲಿದೆ ಬಿಗ್‌ ಟ್ವಿಸ್ಟ್‌

Sampriya
ಬುಧವಾರ, 13 ನವೆಂಬರ್ 2024 (16:44 IST)
Photo Courtesy X
ಕನ್ನಡ ಬಿಗ್‌ಬಾಸ್‌ ಸೀಸನ್ 11ರ ಕಳೆದ ವಾರದಲ್ಲಿ ನೋ ಎಲಿಮಿನೇಷನ್ ವಾರವಾಗಿದ್ದರೂ, ಭವ್ಯಾ ಎಲಿಮಿನೇಟ್ ಎಂದು ಮನೆಮಂದಿಗೆಲ್ಲ ಶಾಕ್ ನೀಡಲಾಗಿತ್ತು.  ಎಲಿಮಿನೇಷನ್‌ನಿಂದ ಪಾರಾದ ಭವ್ಯ ಬಿಗ್‌ಬಾಸ್‌ ಪ್ರ್ಯಾಂಕ್‌ಗೆ ಕಣ್ಣೀರು ಹಾಕಿದ್ದರು. ಆದರೆ ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಈ ವಾರ 10 ಸ್ಪರ್ಧಿಗಳು ಎಲಿಮಿನೇಷನ್ ಬಿಸಿಯಲ್ಲಿದ್ದು, ಹಾಗಾಗಿ ಡಬಲ್‌ ಎಲಿಮಿನೇಷನ್ ಇರುವ ಸಾಧ್ಯತೆಯಿದೆ ಎಂದು ಪ್ರೇಕ್ಷಕರು ಲೆಕ್ಕಾಚಾರ ಹಾಕಿದ್ದಾರೆ. ಅನುಷಾ ರೈ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಭವ್ಯಾ ಗೌಡ, ಧರ್ಮ ಕೀರ್ತಿರಾಜ್, ಗೋಲ್ಡ್ ಸುರೇಶ್, ಗೌತಮಿ ಜಾದವ್, ಹನುಮಂತ, ಶಿಶಿರ್ ಶಾಸ್ತಿç, ಉಗ್ರಂ ಮಂಜು ಮೇಲೆ  ಎಲಿಮಿನೇಷನ್ ತೂಗುಗತ್ತಿ ಇದೆ.

ಯಾರಿಗೆ ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಕೊನೆ ವಾರವಾಗಿರುತ್ತೆ ಎಂಬುದನ್ನು ತಿಳಿಯಲು ಕಾದು ನೋಡಬೇಕಾಗಿದೆ.

ಈಗಾಗಲೇ ಸ್ಟ್ರಾಂಗ್ ಸ್ಪರ್ಧಿಗಳಾಗಿದ್ದ ಯಮುನಾ, ರಂಜಿತ್, ಹಂಸ, ಮಾನಸಾ ಅವರ ಆಟ ದೊಡ್ಮನೆಯಲ್ಲಿ ಅಂತ್ಯವಾಗಿದೆ.

ಆರಂಭದಿಂದಲೂ  ಸ್ಪರ್ಧಿಗಳ ನಡುವಿನ ಮನಸ್ತಾಪ, ಮಾತು, ಜಗಳದ ಮೂಲಕ ಹೆಚ್ಚು ಸದ್ದಾಗಿದ್ದ ಬಿಗ್‌ಬಾಸ್‌ನಲ್ಲಿ ಹನುಮಂತು ವೈಲ್ಡ್‌ ಕಾರ್ಡ್‌ ನಂತರ ಮನೆಯಲ್ಲಿ ನಗು ಹೆಚ್ಚಾಗಿದೆ. ಇದೀಗ ಈ ವಾರ ಜೋಡಿಗಳ ಮಧ್ಯೆ ಸ್ಪರ್ಧೆ ನಡೆಯುತ್ತಿದ್ದು, ಯಾರಿಗೆ ಕ್ಯಾಪ್ಟನ್ ಬೆಡ್ ರೂಂ ತೆರೆಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಫ್ಯಾನ್‌ಗೆ ಗುಡ್‌ನ್ಯೂಸ್‌, ದಿ ಡೆವಿಲ್ ಶೂಟಿಂಗ್ ಮುಕ್ತಾಯ

ಸೋ ಲಾಂಗ್ ವ್ಯಾಲಿ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಿರ್ದೇಶಕನಿಗೆ ನಟಿ ರುಚಿ ಗುಜ್ಜರ್ ಕಪಾಳಮೋಕ್ಷ

ತಾನು ನಿಜಜೀವನದಲ್ಲೂ ಹಿರೋಯಿನ್‌ ಎಂದು ಡಿ ಬಾಸ್‌ ಅಭಿಮಾನಿಗಳ ಕಾಲೆಳೆದು, ಮತ್ತೊಂದು ಸವಾಲು ಹಾಕಿದ ರಮ್ಯಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಮುಂದಿನ ಸುದ್ದಿ
Show comments