ಕಳೆದ ವಾರ ಶೇ. 12ಕ್ಕಿಂತ ಅಲ್ಪ ಪ್ರಮಾಣದ ಹೆಚ್ಚಳ ಕಂಡಿದ್ದ ಹಣದುಬ್ಬರ ಅಂತಿಮವಾಗಿ ಸೆಪ್ಟೆಂಬರ್ 20ಕ್ಕೆ ವಾರಂತ್ಯಗೊಂಡಂತೆ ಶೇ. 11.99ಕ್ಕೆ ಇಳಿಕೆಯಾಗಿರುವುದು ಸರಕಾರದ ನಿರ್ಧಾರಗಳು ಸಕಾರಾತ್ಮಕವಾಗಿವೆ ಎನ್ನುವ ಅಭಿಪ್ರಾಯ ಜನತೆಯಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಹಣದುಬ್ಬರ ಜುಲೈ 25ಕ್ಕೆ ವಾರಂತ್ಯಗೊಂಡಂತೆ ಸಗಟು ದರದ ಸೂಚ್ಯಂಕ 241.4 ರಿಂದ 241 ಪಾಯಿಂಟ್‌ಗಳ ಇಳಿಕೆ ಕಂಡಿದ್ದು ಹಣದುಬ್ಬರ ಶೇ.12.53 ರಿಂದ ಶೇ. 12.01ವರೆಗೆ ಇಳಿಕೆಯಾಗಿದೆ.
ಕಳೆದ ಕೆಲ ವಾರಗಳಿಂದ ಹಣದುಬ್ಬರ ನಿರಂತರವಾಗಿ ಇಳಿಮುಖವಾಗಿ ಸಾಗುತ್ತಿದ್ದು, ಕಳೆದ ವಾರಂತ್ಯಗೊಂಡಂತೆ ಶೇ. 12.14ಕ್ಕೆ ನಿಯಂತ್ರಿತವಾಗಿತ್ತು.
ಅಹಾರೇತರ ವಸ್ತುಗಳ ದರಗಳು ಶೇ. 1.5ರಷ್ಟು ಇಳಿಕೆಯಾಗಿದ್ದು,ಇಂಧನ, ವಿದ್ಯುತ್ ಮತ್ತಿತರ ವಸ್ತುಗಳ ದರಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಉತ್ಪಾದಕ ವಸ್ತುಗಳ ದರಗಳಲ್ಲಿ ಶೇ. 0.1ರಷ್ಟು ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.