Article Kannada Business News %e0%b2%b5%e0%b3%8b%e0%b2%b2%e0%b3%8d%e0%b2%b5%e0%b3%8a %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%b0%e0%b2%bf%e0%b2%af%e0%b2%be%e0%b2%af%e0%b2%bf%e0%b2%a4%e0%b2%bf %e0%b2%a6%e0%b2%b0 108100200003_1.htm

Daily Horoscope

Select Your Language

Notifications

webdunia
webdunia
webdunia
webdunia

ವೋಲ್ವೊ: ಮತ್ತೆ ರಿಯಾಯಿತಿ ದರ

ವೋಲ್ವೊ
ಸರ್ಕಾರ ವೋಲ್ವೊ ಬಸ್ ಪ್ರಯಾಣವನ್ನು ಜನತೆಗೆ ಇನ್ನಷ್ಟು ಹತ್ತಿರವಾಗಿಸಲು ಮತ್ತೊಂದು ಹೊಸ ಹೆಜ್ಜೆ ಇಟ್ಟಿದೆ. ಬಿಎಂಟಿಸಿ ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನದಂದು ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.

ಇದು ಇಂದಿನಿಂದ(ಅಕ್ಟೋಬರ್ 2) ಜಾರಿಗೆ ಬರಲಿದೆ. ವಜ್ರ ಬಸ್‌‌ಗಳ ಕನಿಷ್ಠ ಪ್ರಯಾಣ ದರವನ್ನು 5 ರೂ.ಗೆ ಹಾಗೂ ಗರಿಷ್ಠ ದರವನ್ನು 20 ರೂ.ಗೆ ನಿಗದಿಪಡಿಸಲಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಪ್ರಸ್ತುತ ವಜ್ರ ಬಸ್‌‌ಗಳ ಕನಿಷ್ಠ ಪ್ರಯಾಣ ದರ 1ರಿಂದ 45 ರೂ. ಇತ್ತು. ಈಗ ಶೇ 37 ರಷ್ಟು ರಿಯಾಯಿತಿ ನೀಡಲಾಗಿದೆ. ಆದರೆ ಈ ದರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಯು ವಜ್ರ ಬಸ್‌‌ಗಳಿಗೆ ಅನ್ವಯವಾಗುವುದಿಲ್ಲ.

ಸೆ.11ರಿಂದ 4 ದಿನ 1 ರೂ.ಗೆ ವೋಲ್ವೊ ಸೇವೆ ಒದಗಿಸಿದ್ದು, ಈ ಅವಧಿಯಲ್ಲಿ 3.25 ಲಕ್ಷ ಜನ ಪ್ರಯಾಣಿಸಿದ್ದರು ಎಂದು ಸಚಿವರು ಹೇಳಿದರು. ಈ ವಿಶೇಷ ರಿಯಾಯಿತಿಯಿಂದ ಜನ ತಮ್ಮ ಸ್ವಂತ ವಾಹನದ ಬದಲು ವೋಲ್ವೊದಲ್ಲಿ ಪ್ರಯಾಣಿಸುತ್ತಾರೆ. ಇದರಿಂದ ಸಂಚಾರ ದಟ್ಟಣೆಯು ಕಡಿಮೆಯಾಗುತ್ತದೆ ಎಂದರು.

Share this Story:

Follow Webdunia kannada