Select Your Language

Notifications

webdunia
webdunia
webdunia
webdunia

ವಿದೇಶೀ ಹೂಡಿಕೆದಾರರನ್ನು ಇನ್ನೂ ಆಕರ್ಷಿಸುತ್ತಿರುವ ಭಾರತ

ವಿದೇಶೀ ಹೂಡಿಕೆದಾರರನ್ನು ಇನ್ನೂ ಆಕರ್ಷಿಸುತ್ತಿರುವ ಭಾರತ
ನವದೆಹಲಿ , ಸೋಮವಾರ, 23 ಫೆಬ್ರವರಿ 2009 (16:16 IST)
ಜಾಗತಿಕ ಆರ್ಥಿಕ ಕುಸಿತದ ಪ್ರಭಾವ ಭಾರತದ ಮೇಲಿದ್ದರೂ, ಕೇವಲ ಒಂದು ತಿಂಗಳಲ್ಲಿ ಭಾರತ ಒಂದು ಬಿಲಿಯನ್ ಡಾಲರ್‌ಗಳ ವಿದೇಶೀ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಕೈಗಾರಿಕಾ ನೀತಿ ಇಲಾಖೆಯ ಕಾರ್ಯದರ್ಶಿ ಅಜಯ್ ಶಂಕರ್ ಹೇಳಿದ್ದಾರೆ.

ಸಾಗರೋತ್ತರ ಹೂಡಿಕೆ ಈ ಆರ್ಥಿಕ ವರ್ಷದಲ್ಲಿ ಕಳೆದ ಸೆಪ್ಟೆಂಬರ್‌ನಿಂದ ನಂತರ ತೀರಾ ಕಡಿಮೆಯಾಗಿದೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲ. ಬಹುತೇಕ ಎಲ್ಲ ರಾಷ್ಟ್ರಗಳಿಗೂ ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ತಟ್ಟಿದೆ. ಆದರೂ ಭಾರತ ಈಗಲೂ ತಿಂಗಳಿಗೆ ಬಿಲಿಯನ್ ಡಾಲರ್‌ಗೂ ಹೆಚ್ಚಿನ ವಿದೇಶೀ ಹೂಡಿಕೆ ಕಂಡುಬರುತ್ತಿದೆ. ಇದು ಉತ್ತಮ ಪ್ರೋತ್ಸಾಹದಾಯಕ ಬೆಳವಣಿಗೆ ಎಂದರು.

ಕಳೆದ ಐದು ವರ್ಷಗಳಲ್ಲಿ ಭಾರತ ವೀದೇಶೀ ಹೂಡಿಕೆದಾರರಲ್ಲಿ ಸಾಕಷ್ಟು ಧೈರ್ಯ ಮೂಡಿಸಿದ್ದು, ಉತ್ತಮ ಸಾಧನೆ ತೋರಿದೆ. ಸೆಪ್ಟೆಂಬರ್‌ವರೆಗೆ ವಿದೇಶೀ ಬಂಡವಾಳ ಹೂಡಿಕೆ 2.5ರಿಂದ ಮೂರು ಬಿಲಿಯನ್ ಯಎಸ್ ಡಾಲರ್‌ಗಳಷ್ಟಿತ್ತು ಎಂದು ಅಜಯ್ ಶಂಕರ್ ತಿಳಿಸಿದರು.

Share this Story:

Follow Webdunia kannada