Publish Date: Mon, 06 Oct 2008 (14:16 IST)
Updated Date: Mon, 06 Oct 2008 (13:26 IST)
ಬುಷ್ ಆಡಳಿತದ 700 ಶತಕೋಟಿ ಡಾಲರ್ ಹಣಕಾಸು ಸಹಕಾರ ಪ್ಯಾಕೇಜ್ ವಿಫಲವಾಗುವ ಭೀತಿಯೊಂದಿಗೆ, ತೈಲ ಬೇಡಿಕೆಯಲ್ಲಿ ಇಳಿಕೆ ಉಂಟಾದ ಪರಿಣಾಮವಾಗಿ, ಜಾಗತಿಕ ಕಚ್ಚಾತೈಲ ಬೆಲೆಯು ಸೋಮವಾರದ ವಹಿವಾಟಿನಲ್ಲಿ ಭಾಗಶಃ ಎರಡು ಡಾಲರ್‌ನಷ್ಟು ಇಳಿಕೆಗೊಂಡಿದೆ.
ನವೆಂಬರ್ ತಿಂಗಳ ವಿತರಣೆಗಾಗಿರುವ ನ್ಯೂಯಾರ್ಕ್ ಮುಖ್ಯ ಗುತ್ತಿಗೆಯ ಲೈಟ್ ಸ್ವೀಟ್ ಕಚ್ಚಾತೈಲ ಬೆಲೆಯು 1.92ರಷ್ಟು ಇಳಿಕೆಗೊಂಡು ಬ್ಯಾರಲ್‌ಗೆ 91.96 ಡಾಲರ್‌ಗೆ ತಲುಪಿದೆ.
ಅದೇ ರೀತಿ, ನವೆಂಬರ್ ತಿಂಗಳ ವಿತರಣೆಗಾಗಿರುವ ಬ್ರೆಂಟ್ ನಾರ್ತ್ ಸೀ ಕಚ್ಚಾತೈಲ ಬೆಲೆಯು 1.75 ಡಾಲರ್‌ನಷ್ಟು ಇಳಿಕೆಗೊಂಡು, ಬ್ಯಾರಲ್‌ಗೆ 88.50 ಡಾಲರ್‌ಗೆ ತಲುಪಿದೆ. ಶುಕ್ರವಾರ ಇದರ ಬೆಲೆಯು ಬ್ಯಾರಲ್‌ವೊಂದಕ್ಕೆ 90.25 ಡಾಲರ್‌ನಷ್ಟಿತ್ತು.
ರೂಪಾಯಿ ಮೌಲ್ಯ ಇಳಿಕೆ:
ಏತನ್ಮಧ್ಯೆ, ರಾಜ್ಯ ನಿಯಂತ್ರಿತ ಬ್ಯಾಂಕುಗಳು ಹೆಚ್ಚು ಡಾಲರ್ ಮಾರಾಟ ಮಾಡಿದ ಫಲವಾಗಿ ಮತ್ತು ವಿದೇಶಿ ಬ್ಯಾಂಕ್‌ಗಳಲ್ಲಿ ಅಮೆರಿಕ ಕರೆನ್ಸಿ ಬೇಡಿಕೆಯ ಹೆಚ್ಚಳದಿಂದಾಗಿ, ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 47.30 ರೂ.ಗಳಿಗೆ ಕುಸಿತಗೊಂಡಿದೆ. 2003ರ ನಂತರ, ರೂಪಾಯಿ ಮೌಲ್ಯವು ಇಷ್ಟು ಕೆಳಮಟ್ಟಕ್ಕಿಳಿದಿರುವುದು ಇದೇ ಮೊದಲ ಬಾರಿಯಾಗಿದೆ.
ಫಾರೆಕ್ಸ್ ಮಾರುಕಟ್ಟೆಯಲ್ಲಿ ಇಂದು ಮುಂಜಾನೆಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 21 ಪೈಸೆಯಷ್ಟು ಇಳಿಕೆಗೊಂಡಿದೆ.