Publish Date: Mon, 20 Apr 2009 (16:51 IST)
Updated Date: Mon, 20 Apr 2009 (16:51 IST)
ಹಣದುಬ್ಬರವು ಶೂನ್ಯಕ್ಕೆ ತಲುಪಿರುವ ಈ ಹಂತದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಬಡ್ಡಿ ದರ ಇಳಿಸಲು ಇದು ಸೂಕ್ತ ಕಾಲ ಎಂದು ಕೈಗಾರಿಕೋದ್ಯಮ ಸಂಸ್ಥೆ ಆಸೋಚಾಮ್ ಹೇಳಿದೆ. ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಉದ್ಯೋಗ ನಷ್ಟ ಹೊಂದಿದ ವಲಯಗಳಿಗೆ ಉತ್ತೇಜನ ಕ್ರಮ ಅಗತ್ಯವೆಂದು ಸಹ ಅದು ಹೇಳಿದೆ.