ಬೆಂಗಳೂರು : ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡಲು ಮಾರ್ಚ್ 31 ಕೊನೆಯ ದಿನವಾಗಿದ್ದು, ಆದರೆ ಈಗ ಸರ್ಕಾರ ಈ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಿದೆ.
ಹೌದ. ಪಾನ್ ಕಾರ್ಡ್ ಜೊತೆ ಆಧಾರ್ ಜೋಡಣೆ ಮಾಡುವ ಅವಧಿಯನ್ನು ಹಲವು ಬಾರಿ ವಿಸ್ತರಿಸಲಾಗಿದ್ದರೂ ಸಹ, ನಿರೀಕ್ಷಿತ ಪ್ರಮಾಣದಲ್ಲಿ ಆಧಾರ್ ಜೊತೆ ಪಾನ್ ಕಾರ್ಡ್ ಜೋಡಣೆಯಾಗದ ಕಾರಣ ಸರ್ಕಾರ ಈ ಅವಧಿಯನ್ನು ಆರು ತಿಂಗಳ ಕಾಲ ಅಂದರೆ 2019 ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಿದೆ.
ಆದ್ದರಿಂದ ಪಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡದವರು ಈ ಕೂಡಲೆ ಈ ವಿಧಾನಗಳ ಮುಖಾಂತರ ಜೋಡಿಸಬಹುದು:-
1. incometaxindiaefiling.gov.in ಭೇಟಿ ನೀಡಿ ಲಿಂಕ್ ಆಧಾರ್ ಎನ್ನುವ ಲಿಂಕ್ ಒತ್ತಿ ಆಧಾರ್ ಜೋಡಿಸಬಹುದು.
2. ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗಲೇ ಲಿಂಕ್ ಮಾಡಬಹುದು.
3. ಎಸ್‌ಎಂಎಸ್ ಮೂಲಕ ಜೋಡಿಸಲು UIDPAN<12-digit Aadhaar><10-digit PAN> ಎಂದು ಟೈಪ್ ಮಾಡಿ 567678 ಇಲ್ಲವೇ 56161 ಗೆ ಎಸ್‌ಎಂಎಸ್ ಕಳಿಸಿ
4. ಹೊಸ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗಲೂ ಕೂಡ ಪಾನ್ ನೊಂದಿಗೆ ಆಧಾರ್ ಜೋಡಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.