Publish Date: Mon, 13 Oct 2008 (17:16 IST)
Updated Date: Mon, 13 Oct 2008 (17:05 IST)
ಸಿಂಗೂರ್‌ನಲ್ಲಿ ವಿವಾದಗಳಿಂದಾಗಿ ಬೇಸತ್ತು ಗುಜರಾತ್‌ಗೆ ಬಂದಿಳಿದ ಟಾಟಾ ಮೋಟಾರ್ಸ್‌ನ ನ್ಯಾನೋಗೆ ಮತ್ತೊಂದು ಸವಾಲು ಎದುರಾಗಿದೆ. ನ್ಯಾನೋ ದರದಲ್ಲಿ ಕಾರು ನೀಡಲು ತಾವು ಸಿದ್ದ ಎಂದು ಗುಜರಾತ್ ಕಂಪೆನಿಯೊಂದು ಘೋಷಿಸಿದೆ.
ವಿದ್ಯುತ್‌ಚಾಲಿತ ದ್ವಿಚಕ್ರವಾಹನಗಳನ್ನು ತಯಾರಿಸುವ ಅಜಂತಾ ಉತ್ಪಾದಕ ಸಂಸ್ಥೆ, ನ್ಯಾನೋದೊಂದಿಗೆ ಸ್ಪರ್ಧಿಸಲು ಒರೆವಾ-ಇ ಕಾರನ್ನು ಸಿದ್ದಪಡಿಸಿದ್ದು, ನ್ಯಾನೋ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಒರೆವಾ-ಇ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅಜಂತಾ ಕಂಪೆನಿಯ ಮೂಲಗಳು ತಿಳಿಸಿವೆ.
ಇ-ದ್ವಿಚಕ್ರವಾಹನ ನಿರ್ಮಾಣ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿದ್ದು, ವಿದ್ಯುತ್‌ಚಾಲಿತ ಕಾರು ನಿರ್ಮಾಣ ಕ್ಷೇತ್ರದಲ್ಲಿ ಪ್ರವೇಶಿಸಲು ಸಿದ್ದತೆ ನಡೆಸಿದ್ದೇವೆ. ನ್ಯಾನೋ ದರವನ್ನು ಗಮನದಲ್ಲಿಟ್ಟುಕೊಂಡು ಒರೆವಾ-ಇ ಕಾರನ್ನು ಸಿದ್ದಪಡಿಸಿದ್ದರಿಂದ ಒಂದು ಲಕ್ಷ ರೂ.ಗಳೊಳಗೆ ದರ ನಿಗದಿಪಡಿಸಲಾಗಿದೆ ಎಂದು ಅಜಂತಾ ಉತ್ಪಾದಕ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯಸುಖ್ ಪಟೇಲ್ ತಿಳಿಸಿದ್ದಾರೆ.
ನ್ಯಾನೋ ಮಾರುಕಟ್ಟೆಗೆ ಬರಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಒರೆವಾ-ಇ ಕಾರನ್ನು ಮಾರುಕಟ್ಟೆಗೆ ಬಿಡಲು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ ಒರೆವಾ-ಇ ಕಾರನ್ನು ಮಾರುಕಟ್ಟೆಗೆ ತರಲು ನಿರ್ಧರಿಸಿದ್ದು,ಆದರೆ ಕಾರಿನ ಮಾಡೆಲ್‌ಗಳಲ್ಲಿ ಅಂತಿಮ ಹಂತದ ಕೆಲ ಬದಲಾವಣೆಗಳ ಅವಶ್ಯಕತೆಯ ಹಿನ್ನೆಲೆಯಲ್ಲಿ ಕೆಲ ಕಾಲ ಮುಂದೂಡಲಾಗಿದೆ ಎಂದು ಕಾರಿನ ಡೀಲರ್ ಯೋಗೇಶ್ ಟಂಕ್ ಹೇಳಿದ್ದಾರೆ.