ಟಾಟಾ ಮೋಟಾರ್ಸ್‌ನ ಮೂಲ ಕಂಪೆನಿಯಾದ ಬ್ರಿಟನ್‌ನ ಜಾಗ್ವಾರ್ ಲಾಂಡ್ ರೋವರ್ ತೊಂದರೆಯಲ್ಲಿದ್ದರೂ ಸರಕಾರ ನೀಡಲು ಉದ್ದೇಶಿಸಿರುವ ಸಾಲವನ್ನು ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.
ವಾಹನೋದ್ಯಮ ಸಂಸ್ಥೆ ಜಾಗ್ವಾರ್ ಲಾಂಡ್ ರೋವರ್‌ಗೆ ಬ್ರಿಟನ್ ಸರಕಾರದ ವಹಿವಾಟು ಇಲಾಖೆ 450 ಮಿಲಿಯನ್ ಪೌಂಡ್ ಸಾಲ ಪಡೆಯಲು ಅಂತಿಮ ಕರೆಯನ್ನು ನೀಡಿತ್ತು. ಆದರೆ ಸರಕಾರ ಶೇ.15 ರಷ್ಟು ಕಮಿಶನ್ ಪಾವತಿಸಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಾಲವನ್ನು ಪಡೆಯುವುದಿಲ್ಲ ಎಂದು ಜಾಗ್ವಾರ್ ಮೂಲಗಳು ತಿಳಿಸಿವೆ.
ಕೆಲ ಕಾರಣಗಳಿಂದಾಗಿ ಸರಕಾರದ ಸಾಲ ಒಪ್ಪಂದವನ್ನು ತಿರಸ್ಕರಿಸುವುದಾಗಿ ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.
ವಾಹನೋದ್ಯಮ ಸಂಸ್ಥೆಯ ಚೇತರಿಕೆಗಾಗಿ ಒಟ್ಟು ಪರಿಹಾರ ಪ್ಯಾಕೇಜ್ 800 ಮಿಲಿಯನ್ ಪೌಂಡ್‌ಗಳಾಗಿದ್ದು, ಅದರಲ್ಲಿ 340
ಮಿಲಿಯನ್ ಪೌಂಡ್‌ಗಳನ್ನು ಯುರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಸಾಲವನ್ನು ನೀಡುತ್ತಿದ್ದು, 450 ಮಿಲಿಯನ್ ಪೌಂಡ್‌ಗಳನ್ನು ಬ್ರಿಟನ್ ಸರಕಾರ ಒದಗಿಸಲು ಸಮ್ಮತಿಸಿತ್ತು ಎಂದು ಒಪ್ಪಂದದ ಮೂಲಗಳು ತಿಳಿಸಿವೆ
ಆದರೆ ಬ್ರಿಟನ್ ಸರಕಾರ ಆರೋಪಗಳನ್ನು ತಳ್ಳಿಹಾಕಿದ್ದು ಪರಿಸರಕ್ಕೆ ಪೂರಕವಾದ ವಾಹನೋದ್ಯಮ ಸಂಸ್ಥೆಯನ್ನು ಯಶಸ್ವಿನತ್ತ ಸಾಗಿಸಬೇಕಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.