Publish Date: Sat, 27 Sep 2008 (18:45 IST)
Updated Date: Sat, 27 Sep 2008 (18:45 IST)
ಜಾಗತಿಕ ಆರ್ಥಿಕ ವಹಿವಾಟಿನ ಕುಸಿತದ ಹಿನ್ನೆಲೆಯಲ್ಲಿ ಚಿನ್ನದ ದರದಲ್ಲಿ 220 ರೂಪಾಯಿಗಳ ಇಳಿಕೆಯಾಗಿದ್ದು 12,960 ರೂ.ಗಳಿಗೆ ಚಿನಿವಾರ ಮಾರುಕಟ್ಟೆಯಲ್ಲಿ ಅಂತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಯುರೋ ವಿರುದ್ಧ ಡಾಲರ್ ಗಣನೀಯವಾಗಿ ಏರಿಕೆ ಕಂಡ ಹಿನ್ನೆಲೆಯಲ್ಲಿ ಶೇರುಪೇಟೆಯ ಹೂಡಿಕೆಗೆ ಪರ್ಯಾಯವಾಗಿ ಚಿನ್ನದ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದ್ದ ಹೂಡಿಕೆದಾರರು ಲಂಡವ್ ಚಿನ್ನದ ಮಾರುಕಟ್ಟೆಯಲ್ಲಿ ಸತತ ಕುಸಿತದ ಹಿನ್ನೆಲೆಯಲ್ಲಿ ದರದಲ್ಲಿ ಇಳಿಕೆಯಾಗಿದೆ ಎಂದು ಚಿನಿವಾರ ಪೇಟೆಯ ವಹಿವಾಟುದಾರರು ಅಭಿಪ್ರಾಯಪಚ್ಚಿದ್ದಾರೆ.
ಚಿನ್ನದ ದರ ಪ್ರತಿ 10 ಗಾಂಗೆ 7.80 ಡಾಲರ್‌ಗಳ ಇಳಿಕೆಯಾಗಿ 870.10 ಡಾಲರ್‌ಗಳಿಗೆ ತಲುಪಿದ್ದು, ಬೆಳ್ಳಿಯ ದರ 10.5ಸೆಂಟ್‌ಗಳ ಇಳಿಕೆಯಾಗಿ 13,105ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ದೇಶಿಯ ಮಾರುಕಟ್ಟೆಯಲ್ಲಿ ಸ್ಟಾಂಡರ್ಡ್ ಚಿನ್ನ ಹಾಗೂ ಆಭರಣಗಳು 220 ರೂಪಾಯಿಗಳಿಗೆ ಇಳಿಕೆಯಾಗಿ ಪ್ರತಿ 10 ಗ್ರಾಂಗಳಿಗೆ 12,810 ರೂಪಾಯಿಗಳಿಗೆ ಇಳಿಕೆಯಾಗಿದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.