Publish Date: Fri, 10 Oct 2008 (19:58 IST)
Updated Date: Fri, 10 Oct 2008 (19:57 IST)
ಭಾರತೀಯ ಶೇರುಪೇಟೆ ಮತ್ತೆ ಭಾರೀ ಅಂತರದಲ್ಲಿ ಶುಕ್ರವಾರ ಮುಗ್ಗರಿಸಿದ ಬೆನ್ನಲ್ಲೇ, ಚಿನ್ನದ ಬೆಲೆ ಕೂಡ ದಿಢೀರನೆ ಏರಿಕೆ ಕಾಣುವ ಮೂಲಕ ಗಗನಕ್ಕೇರಿದೆ.
ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10ಗ್ರಾಂಗೆ 14,200 ರೂ.ಗಡಿ ದಾಟಿದ್ದು,ಒಂದೆಡೆ ಮುಗ್ಗರಿಸಿದ ಶೇರುಪೇಟೆ ಬಿಸಿಯೊಂದಿಗೆ ಚಿನ್ನದ ಬೆಲೆಯೂ ಏರುವ ಮೂಲಕ ಮಧ್ಯಮವರ್ಗದ ಜೇಬಿಗೆ ಕತ್ತರಿ ಹಾಕಿದಂತಾಗಿದೆ.
ಶೇರುಪೇಟೆಯ ಹಗ್ಗ-ಜಗ್ಗಾಟವೂ ಮುಂದುವರಿದಿರುವಂತೆಯೇ,ಈ ಮೊದಲಿನ ಚಿನ್ನದ ವಹಿವಾಟಿನಲ್ಲಿ 10 ಗ್ರಾಂಗೆ 13,850 ರೂಪಾಯಿಯಷ್ಟು ಏರಿಕೆ ಕಂಡಿದ್ದು,ಇದೀಗ ಮುಂಬೈ ಶೇರುಮಾರುಕಟ್ಟೆಯಲ್ಲಿನ ಭಾರೀ ಕುಸಿತಕಂಡ ಬೆನ್ನಲ್ಲೇ ಚಿನ್ನದ ಬೆಲೆ ಮತ್ತಷ್ಟು ಏರಿಕೆಗೊಂಡಿದೆ.
ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿನ ಡೋಲಾಯಮಾನ ಸ್ಥಿತಿಯಿಂದ ಕಂಗೆಟ್ಟ ಭಾರತೀಯ ಶೇರುಪೇಟೆ ಮುಗ್ಗರಿಸಿದ ನಂತರ,ಈ ಬೆಳವಣಿಗೆ ಕಂಡಿರುವುದಾಗಿ ಮಾರುಕಟ್ಟೆ ಮೂಲಗಳು ತಿಳಿಸಿವೆ.