ಜಾಗತಿಕ ಬೇಡಿಕೆ ಕುಸಿತ ಹಾಗೂ ಕಚ್ಚಾ ತೈಲ ಸರಬರಾಜಿನಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ತೈಲ ದರಶೇ 5.4ರಷ್ಟು ಕುಸಿತಗೊಂಡಿದ್ದು, 2004ರ ಬಳಿಕ ಈ ಪ್ರಮಾಣದಲ್ಲಿ ಕುಸಿಯುತ್ತಿರುವುದು ಇದೇ ಮೊದಲಬಾರಿಯಾಗಿದೆ.
ಶುಕ್ರವಾರದಂದು ಕಚ್ಚಾ ತೈಲ ದರಗಳು ಶೇ 5.4ರಷ್ಟು ಇಳಿಕೆಯಾಗಿರುವುದರಿಂದ ಕಳೆದ ಜುಲೈನ ಮಧ್ಯಭಾಗದಿಂದ ಇಲ್ಲಿಯವರೆಗೆ ಶೇ.20ರಷ್ಟು ಇಳಿಕೆಯಾದಂತಾಗಿದೆ. ವಿಯನ್ನಾದಲ್ಲಿ ಸೆಪ್ಟೆಂಬರ್ 9 ರಂದು ಒಪೆಕ್ ಸಭೆ ನಡೆಯಲಿದ್ದು ಅಧಿಕೃತ ಉತ್ಪಾದನೆ ಮಿತಿಗಳನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ
ಅಮೆರಿಕದ ಕಚ್ಚಾ ತೈಲ ದರಗಳಲ್ಲಿ ಶೇ 5.4ರಷ್ಟು ಕುಸಿತವಾಗಿದ್ದು ಪ್ರತಿ ಬ್ಯಾರೆಲ್‌ಗೆ 114.59 ಡಾಲರ್‌ಗಳಿಗೆ ನಿಯಂತ್ರಣಗೊಂಡಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿನ ದಿನ ಕಚ್ಚಾ ತೈಲ ಖರೀದಿಸಿದವರು ಇಂದು ಲಾಭ ಪಡೆಯಲಿದ್ದಾರೆ ಎಂದು ಕನ್ಸಲ್‌ಟನ್ಸಿ ಕ್ಯಾಮರೂನ್ ಹಾನೊವರ್‌ನ ವಿಶ್ಲೇಷಕ ಪೀಟರ್ ಬ್ಯೂಟಲ್ ಅಭಿಪ್ರಾಯಪಟ್ಟಿದ್ದಾರೆ.