Article Kannada Business News %e0%b2%89%e0%b2%a6%e0%b3%8d%e0%b2%af%e0%b2%ae%e0%b2%bf %e0%b2%86%e0%b2%b0%e0%b3%8d %e0%b2%8e%e0%b2%b8%e0%b3%8d %e0%b2%b2%e0%b3%8b%e0%b2%a7%e0%b2%be %e0%b2%a8%e0%b2%bf%e0%b2%a7%e0%b2%a8 108100400002_1.htm

Daily Horoscope

Select Your Language

Notifications

webdunia
webdunia
webdunia
webdunia

ಉದ್ಯಮಿ ಆರ್.ಎಸ್.ಲೋಧಾ ನಿಧನ

ಉದ್ಯಮಿ
ಖ್ಯಾತ ಉದ್ಯಮಿ ಹಾಗೂ ಚಾರ್ಟೆಡ್ ಅಕೌಂಟೆಂಟ್ ಆರ್.ಎಸ್.ಲೋಧಾ ಬುಧವಾರ ಲಂಡನ್‌ನಲ್ಲಿ ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

ನನ್ನ ತಂದೆ ಹೃದಯಾಘಾತದಿಂದ ನಿಧನ ಹೊಂದಿರಬಹುದು. ಮರಣೋತ್ತರ ಪರೀಕ್ಷೆಯಿಂದ ಅವರ ಸಾವಿನ ಕಾರಣ ತಿಳಿದುಬರಲಿದೆ ಎಂದು ಲೋಧಾ ಅವರ ಪುತ್ರ ಹರ್ಷ್ ಲೋಧಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರ್.ಎಸ್. ಲೋಧಾ ಅವರು ಪುತ್ರರಾದ ಹರ್ಷ, ಆದಿತ್ಯ ಮತ್ತು ಪುತ್ರಿ ಮೀನಾಕ್ಷಿಯನ್ನು ಅಗಲಿದ್ದಾರೆ.

ಬಿರ್ಲಾ ಕಂಪನಿಯ ಒಡತಿ ಪ್ರಿಯಂವದಾ ಬಿರ್ಲಾ ತಮ್ಮ ಐದುಸಾವಿರ ಕೋಟಿ ರೂಪಾಯಿಗಳ ಆಸ್ತಿಯನ್ನು ಅಕೌಂಟೆಂಟ್ ಆಗಿದ್ದ ಲೋಧಾ ಅವರ ಹೆಸರಿಗೆ ಬರೆದಿದ್ದರು. 2004ರಲ್ಲಿ ಪ್ರಿಯಂವದಾ ನಿಧನರಾಗುತ್ತಿದ್ದಂತೆ, ಅವರು ಬರೆದಿಟ್ಟಿದ್ದ ಉಯಿಲು ಬಹಿರಂಗಗೊಂಡಿತ್ತು.

ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಆರ್.ಎಸ್.ಲೋಧಾ ಆಂಡ್ ಕಂಪನಿ ಮಾಲಿಕರೂ ಆಗಿದ್ದ ಲೋಧಾ, ಏಳನೇ ಬೃಹತ್ ಅಕೌಂಟಿಂಗ್ ಮತ್ತು ಕನ್ಸಲ್ಟನ್ಸಿ ಸಂಸ್ಥೆ ಬಿಡಿಒ ಇಂಟರ್ನಾಶನಲ್‌ನ್ನು ಭಾರತಕ್ಕೆ ತರಲು ಕಾರಣರಾಗಿದ್ದರು.

Share this Story:

Follow Webdunia kannada