ಅಮೆರಿಕದಲ್ಲಿ ಕಳಪೆ ಔಷಧ ಹಗರಣದಲ್ಲಿ 19 ಭಾರತೀಯರು
ನ್ಯೂಯಾರ್ಕ್ , ಬುಧವಾರ, 3 ಆಗಸ್ಟ್ 2011 (16:10 IST)
ಮೆಡಿಕೇಡ್ ಮತ್ತು ಇತರ ಖಾಸಗಿ ಮೆಡಿಕಲ್ ವಿಮಾ ಕಂಪನಿಗಳಿಂದ ವಿಮೆ ಪಡೆಯುವ ನಿಟ್ಟಿನಲ್ಲಿ ಸುಳ್ಳು ದಾಖಲೆ ನೀಡಲು ನೆರವಾಗಲೆಂದು ನಕಲಿ ಔಷಧ ಪೂರೈಕೆ ಹಗರಣದಲ್ಲಿ ಭಾಗಿಯಾಗಿರುವ 26 ಮಂದಿಯನ್ನು ಅಮೆರಿಕದ ಮಹತ್ವದ ನ್ಯಾಯಾಂಗ ತನಿಖಾ ಸಮಿತಿ ತನ್ನ ವಶಕ್ಕೆ ತೆಗೆದುಕೊಂಡಿದ್ದು, ಇವರಲ್ಲಿ 19 ಮಂದಿ ಭಾರತೀಯರು ಸೇರಿದ್ದಾರೆ. ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಈ 26 ಆರೋಪಿಗಳಲ್ಲಿ ವೈದ್ಯರು ಮತ್ತು ಮನೋರೋಗ ತಜ್ಞರಗಳೂ ಸೇರಿದ್ದಾರೆ ಎಂದು ತಿಳಿದುಬಂದಿದೆ.ಒಟ್ಟಾರೆ ಹಗರಣದ ಕೇಂದ್ರ ಬಿಂದು 49 ವರ್ಷದ ಬಾಬುಭಾಯಿ ಪಟೇಲ್ ಎಂಬ ಭಾರತೀಯ ಮೂಲದ ಔಷಧ ವ್ಯಾಪಾರಿಯಾಗಿದ್ದು, 34 ಕಳಪೆ ಔಷಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಅಲ್ಲದೆ ತನ್ನದೇ ಒಡೆತನದಲ್ಲಿ 26 ಖಾಸಗಿ ಔಷಧಿ ಕೇಂದ್ರಗಳನ್ನು ಹೊಂದಿದ್ದು, ಬೇನಾಮಿ ಒಡೆತನದಲ್ಲೂ ಹಲವಾರು ಔಷಧಿ ಕೇಂದ್ರಗಳನ್ನು ಹೊಂದಿರುವುದಾಗಿ ವರದಿ ತಿಳಿಸಿದೆ.