ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿ ಸಂಸ್ಥೆ ಝಡ್‌ಟಿಇ ಭಾರತದಲ್ಲಿ ಹೊಚ್ಚಹೊಸ ಸ್ಮಾರ್ಟ್‍ಫೋನ್ ಬಿಡುಗಡೆ ಮಾಡಿದೆ. ಝಡ್‍ಟಿಇ ಬ್ಲೇಡ್ ಎ2 ಪ್ಲಸ್ ಹೆಸರಿನ ಈ ಫೋನ್ ಬೆಲೆ ರೂ. 11,999 ಎಂದು ಪ್ರಕಟಿಸಿದೆ.
ಈ ಫೋನ್ ಎಕ್ಸ್‌ಕ್ಲೂಸೀವ್ ಆಗಿ ಇ-ಕಾಮರ್ಸ್ ಪೋರ್ಟಲ್ ಫ್ಲಿಪ್‌ಕಾರ್ಟ್‌ನಲ್ಲಿ ಫೆಬ್ರವರಿ 6ರಿಂದ ಲಭ್ಯವಾಗಲಿದೆ. ಒಟ್ಟಾರೆ ದುಬಾರಿ ಅಲ್ಲದ ಮಧ್ಯಮ ಬೆಲೆಯ ಈ ಸ್ಮಾರ್ಟ್‌ಫೋನ್ ಹಲವಾರು ವಿಶೇಷತೆಗಳಿಂದ ಕೂಡಿದೆ. ಅತ್ಯಧಿಕ ಬ್ಯಾಟರಿ ಸಾಮರ್ಥ್ಯದ ಫೋನ್ ಇದು.
ಬ್ಲೇಡ್ ಎ2 ಪ್ಲಸ್ ಫೋನಿನ ವಿಶೇಷತೆಗಳು
* 5.5 ಇಂಚಿನ ಸ್ಪರ್ಶಸಂವೇದಿ ಪರದೆ
* 1.5 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೋಸೆಸರ್
* 13 ಎಂಪಿ ಹಿಂಬದಿ ಕ್ಯಾಮೆರಾ, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್
* 8 ಎಂಪಿ ಮುಂಬದಿ ಕ್ಯಾಮೆರಾ, ಸ್ಕ್ರೀನ್ ಫ್ಯ್ಲಾಶ್
* 4ಜಿಬಿ ರ್ಯಾಮ್
* 32 ಜಿಬಿ ಆಂತರಿಕ ಮೆಮೊರಿ
* ಡ್ಯುಯಲ್ ಸಿಮ್, 4ಜಿ ಬೆಂಬಲಿಸುತ್ತೆ
* 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.