Select Your Language

Notifications

webdunia
webdunia
webdunia
webdunia

ನೀತಾ ಅಂಬಾನಿ ಬಳಸುವ ಮೊಬೈಲ್‌‌ನ ದರ ನಿಮಗೆ ಗೊತ್ತಾ? ಶಾಕ್ ಆಗ್ತೀರಿ ದರ ಕೇಳಿ

ನೀತಾ ಅಂಬಾನಿ ಬಳಸುವ ಮೊಬೈಲ್‌‌ನ ದರ ನಿಮಗೆ ಗೊತ್ತಾ? ಶಾಕ್ ಆಗ್ತೀರಿ ದರ ಕೇಳಿ
ಮುಂಬೈ , ಶುಕ್ರವಾರ, 4 ಆಗಸ್ಟ್ 2017 (19:09 IST)
ಇಂದು ಪ್ರತಿಯೊಬ್ಬರೂ ಗ್ಯಾಜೆಟ್‌ಗಳ ಅಪರಿಮಿತ ಗೀಳು ಹೊಂದಿದ್ದು ಪ್ರತಿಯೊಬ್ಬರು ಉತ್ತಮವಾದ ಗ್ಯಾಜೆಟ್ ಪಡೆಯಲು ಪ್ರಯತ್ನಿಸುತ್ತಾರೆ. ಆದರಂತೆ, ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಕೂಡಾ ವಿಶ್ವದ ಅತ್ಯುತ್ತಮ ಫೋನ್‌ಗಳಲ್ಲಿ ಸ್ಥಾನ ಪಡೆದಿರುವ ಮೊಬೈಲ್ ಬಳಸುತ್ತಾರೆ. ನೀವು ಅವರು ಬಳಸುವ ಮೊಬೈಲ್ ದರ ಮತ್ತು ವೈಶಿಷ್ಟ್ಯಗಳನ್ನು ತಿಳಿದುಕೊಂಡಲ್ಲಿ ದಂಗಾಗುತ್ತಿರಿ.

ಮುಖೇಶ್ ಅಂಬಾನಿ ಕುಟುಂಬದ ಹೆಚ್ಚಿನ ಸದಸ್ಯರು ಬ್ಲ್ಯಾಕ್‌ಬೆರ್ರಿ ಮೊಬೈಲ್ ಹೊಂದಿದ್ದಾರೆ. ಆದರೆ, ನೀತಾ ಅಂಬಾನಿ, ಫಾಲ್ಕನ್ ಸುಪರ್‌ನೋವಾ ಐಫೋನ್ 6 ಪಿಂಕ್ ಡೈಮಂಡ್ ಅನ್ನು ಹೊಂದಿದ್ದಾರೆ.  ಸೆಲ್ ಫೋನ್ ಬೆಲೆ ಕೇವಲ 48.5 ಮಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಕೇವಲ 315 ಕೋಟಿ ರೂಪಾಯಿ.
 
ಮೊಬೈಲ್‌ನ ಭಾರಿ ದರದಲ್ಲಿ ಖಾಸಗಿ ಜೆಟ್ ವಿಮಾನ ಖರೀದಿಸಬಹುದಾಗಿದೆ.  ಈ ಮಾದರಿಯ ಮೊಬೈಲ್‌ನ್ನು ಪ್ರಸಿದ್ಧ ವ್ಯಕ್ತಿಗಳ ವಿಶೇಷ ಆರ್ಡರ್‌ ಮೇಲೆ ಮಾತ್ರವೇ ಉತ್ಪಾದಿಸಲಾಗುತ್ತದೆ.
 
ಈ ಫೋನ್ ಅನ್ನು 2014 ರಲ್ಲಿ ಪ್ರಾರಂಭಿಸಲಾಯಿತು. ಈಗ ಈ ದುಬಾರಿ ಮೊಬೈಲ್ ಫೋನ್ ವಿಶೇಷತೆ ಕುರಿತು ಮಾತನಾಡೋಣ. ಮೊಬೈಲ್‌ಹ್ಯಾಂಡ್‌ಸೆಟ್‌ನಲ್ಲಿ 24 ಕ್ಯಾರೆಟ್ ಗೋಲ್ಡ್ ಮತ್ತು ಪಿಂಕ್ ಗೋಲ್ಡ್‌ನಿಂದ ಮಾಡಲ್ಪಟ್ಟಿದೆ. ಮೊಬೈಲ್ ಬಿದ್ದರೂ ಒಡೆಯದಂತೆ ಮಾಡಲು ಅದರ ಮೇಲೆ ಪ್ಲಾಟಿನಂ ಲೇಪಿಸಲಾಗಿದೆ.
webdunia
ಮುಖೇಶ್ ಅಂಬಾನಿ ಭಾರತದ ಶ್ರೀಮಂತ ಉದ್ಯಮಿ. ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತದ ಉದ್ಯಮಿಯಾಗಿ ಜನಪ್ರಿಯರಾಗಿದ್ದಾರೆ. ಅಂಬಾನಿಗಳು ವಿಪರೀತ ಐಷಾರಾಮಿ ಜೀವನ ಶೈಲಿಯನ್ನು ಹೊಂದಿದ್ದಾರೆಂದರೆ ಅಚ್ಚರಿಯಾಗುವುದಿಲ್ಲ. ಮುಂಬೈಯಲ್ಲಿ ಅಂಬಾನಿ ಅವರ ಮನೆ ಆಂಟಿಲಿಯಾ ವಿಶ್ವದಲ್ಲೇ ಅತಿಹೆಚ್ಚು 10 ದುಬಾರಿ ಮನೆಗಳಲ್ಲಿ ಒಂದಾಗಿದೆ.
 
ಭಾರತದ ಶ್ರೀಮಂತ ವ್ಯಕ್ತಿಯ ಪತ್ನಿಯಾದ ನೀತಾ ಅಂಬಾನಿ ಐಷಾರಾಮಿ ಜೀವನಶೈಲಿಯನ್ನು ಹೊಂದಿದ್ದಾರೆ. ಅವರ ಸೀರೆ, ಕೈಗಡಿಯಾರಗಳು, ಕೈಚೀಲಗಳು, ಪಾದರಕ್ಷೆಗಳ ಎಲ್ಲವೂ ಬ್ರಾಂಡೆಡ್ ಆಗಿವೆ.
 
ಮುಖೇಶ್ ಅಂಬಾನಿಯಂತಹ ಯಶಸ್ವಿ ಉದ್ಯಮಿಯ ಪತ್ನಿಯಾಗಿದ್ದರಿಂದ ಅವರ ಐಷಾರಾಮಿ ಜೀವನ ಆಶ್ಚರ್ಯ ವೆನಿಸುವುದಿಲ್ಲ. 
 
ನೀತಾ ಅಂಬಾನಿ ಈ ವರ್ಷದ ಐಪಿಎಲ್ ಟೂರ್ನಮೆಂಟ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿದ್ದಾರೆ. ಅತ್ಯುತ್ತಮ ಮಹಿಳಾ ಉದ್ಯಮಿ, ಅಲ್ಲದೆ, ಅವರು ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. 
 
ಧೀರೂಭಾಯಿ ಅಂಬಾನಿ ಅವರ ಪುತ್ರ ಮುಕೇಶ್ ಅಂಬಾನಿ ಅವರನ್ನು ನೀತಾ, 1985 ರಲ್ಲಿ ಮದುವೆಯಾದರು. ಅವರಿಗೆ ಒಬ್ಬಳು ಮಗಳು ಮತ್ತು ಇಬ್ಬರು ಪುತ್ರರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಜಿಡಿಪಿಯ 10% ರಷ್ಟು ಸಂಪತ್ತು ಹೊಂದಿರುವ 20 ಭಾರತೀಯ ಬಿಲಿಯನೇರ್‌‌ಗಳು