ರೂ. 500 ಮತ್ತು 1000 ಮುಖಬೆಲೆಯ ದೊಡ್ಡ ಮೊತ್ತದ ನೋಟುಗಳು ರದ್ದಾದ ಮೇಲೆ ಜನ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಹುಡುಕರು ಖಾಸಗಿ ಬ್ಯಾಂಕ್ YES ಮುಂದಡಿ ಇಟ್ಟಿದೆ. ಇದರ ಭಾಗವಾಗಿ ಓಲಾ ಜೊತೆ ಕೈಜೋಡಿಸಿ ಮೊಬೈಲ್ ಎಟಿಎಂಗಳನ್ನು ಬಿಡಲು ನಿರ್ಧರಿಸಿದೆ.
ಈ ಸಂಬಂಧ ಪ್ರಕಟಣೆಯನ್ನೂ ಕೊಟ್ಟಿದೆ. YES ನಿರ್ವಹಿಸುವ ಈ ಮೊಬೈಲ್ ಎಟಿಎಂ ಮೂಲಕ ಯಾವ ಬ್ಯಾಂಕ್ ಖಾತೆದಾರರಾದರೂ ಸೇವೆ ಪಡೆಯಬಹುದು. ದೇಶದಾದ್ಯಂತ 10 ನಗರಗಳ ಸುಮಾರು 30 ಪ್ರದೇಶಗಳಲ್ಲಿ ಈ ಸೇವೆಯನ್ನು ಒದಗಿಸಲಿದ್ದಾರೆ.
ಅಹಮದಾಬಾದ್, ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಪುಣೆ, ಕೊಲ್ಕತ್ತಾ, ಚಂಡಿಗಡ, ಹೈದರಾಬಾದ್, ಜಯ್‌ಪುರ್ ನಗರಗಳಲ್ಲಿ ಮೊಬೈಲ್ ಎಟಿಎಂಗಳು ಓಡಾಡಲಿವೆ. ಯಾವುದೇ ಬ್ಯಾಂಕ್ ಖಾತೆದಾರರು ಡೆಬಿಟ್ ಕಾರ್ಡ್ ಬಳಸಿ ರೂ. 2000 ನಗದು ವಿತ್‌ಡ್ರಾ ಮಾಡಿಕೊಳ್ಳಬಹುದು. ನಗದು ಸಮಸ್ಯೆಯನ್ನು ಪರಿಹರಿಸಲು ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾಗಿ ಎಸ್ ಬ್ಯಾಂಕ್ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.