ಬೆಂಗಳೂರಿನಲ್ಲಿ ಯಾತ್ರಾಜೆನಿಯಿಂದ ಸಿಟಿ ಟ್ಯಾಕ್ಸಿ
ಅಡೆಲೈಡ್ , ಸೋಮವಾರ, 9 ಮಾರ್ಚ್ 2015 (17:27 IST)
ಆನ್‌ಲೈನ್ ಬಸ್ ಟಿಕೆಟಿಂಗ್ ಮತ್ತು ಕ್ಯಾಬ್ ಬುಕಿಂಗ್ ವೇದಿಕೆ ಯಾತ್ರಾಜೆನಿ ಬೆಂಗಳೂರಿನಲ್ಲಿ ಸಿಟಿ ಟ್ಯಾಕ್ಸಿ ಮತ್ತು ಹೊರವಲಯ ಟ್ಯಾಕ್ಸಿ ಬಾಡಿಗೆ ಸೇವೆಗಳನ್ನು ಆರಂಭಿಸಿದೆ. ನಗರದಲ್ಲಿ 100 ಕ್ಯಾಬ್‌ಗಳ ಸಂಚಾರವನ್ನು ಯಾತ್ರಿಜೆನಿ ಆರಂಭಿಸಲಿದ್ದು, ಹೊರವಲಯದ ಪ್ರಯಾಣಕ್ಕೆ 50 ಕ್ಯಾಬ್‌ಗಳನ್ನು ಆರಂಭಿಸಲಿದೆ.
ನಗರ ಟ್ಯಾಕ್ಸಿ ಮತ್ತು ಹೊರವಲಯ ಟ್ಯಾಕ್ಸಿ ಸೇವೆಗಳಿಗೆ ಹೆಚ್ಚಿದ ಬೇಡಿಕೆಯಿಂದ ನಾವು ಈ ಉದ್ಯಮಕ್ಕೆ ಇಳಿದಿದ್ದಾಗಿ ಯಾತ್ರಾ ಜೆನಿ ಅಧ್ಯಕ್ಷ ಮತ್ತು ಸಿಇಒ ರೆನಿಲ್ ಕೊಮಿಟ್ಲಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಿಟಿ ಟ್ಯಾಕ್ಸಿ ಸೇವೆಗೆ ಮೊದಲ ಆರು ಕಿ.ಮೀ.ಗೆ ರೂ. 100 ಮತ್ತು ಹೆಚ್ಚುವರಿ ಕಿ.ಮೀ.ಗೆ 15 ರೂ. ಚಾರ್ಜ್ ಮಾಡಲಾಗುತ್ತದೆ.
ಬೆಂಗಳೂರಲ್ಲದೇ ನೆಲ್ಲೂರು, ತಿರುಪತಿ, ಕವಾಲಿ, ವಿಜಯವಾಡದಲ್ಲಿ ಕೂಡ ಟ್ಯಾಕ್ಸಿ ಸೇವೆಯನ್ನು ಯಾತ್ರಾಜೆನಿ ಆರಂಭಿಸಿದೆ. 2015ರ ಕೊನೆಯಲ್ಲಿ, ಯಾತ್ರಾಜೆನಿ 65 ನಗರಗಳಿಗೆ ಮತ್ತು ಪಟ್ಟಣಗಳಿಗೆ ತನ್ನ ಕಾರ್ಯಾಚರಣೆಯನ್ನು 25,000 ಕ್ಯಾಬ್‌ಗಳೊಂದಿಗೆ ವಿಸ್ತರಿಸಲಿದೆ.