Webdunia - Bharat's app for daily news and videos

Install App

ವಿಶ್ವದ ಅತಿ ದುಬಾರಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ

Webdunia
ಬುಧವಾರ, 1 ಜೂನ್ 2016 (15:15 IST)
ಸಾಕಷ್ಟು ಊಹಾಪೋಹಗಳಿಗೆ ಪೂರ್ಣವಿರಾಮ ನೀಡಿರುವ ಬ್ರಿಟಿಷ್ ಇಸ್ರೇಲಿ ಜಂಟಿ ಸಹಭಾಗಿತ್ವದ ಕಂಪೆನಿಯಾದ ಸಿರಿನ್ ಲ್ಯಾಬ್ಸ್, ಸಂಭಾಷಣೆ ಸುರಕ್ಷತೆಗಾಗಿ ಸೇನೆಯಲ್ಲಿ ಬಳಸಲಾಗುವ ಚಿಪ್ ಟೂ ಚಿಪ್ ಗೂಢಲಿಪೀಕರಣ ಮಾದರಿಯ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 9 ಲಕ್ಷ ರೂಪಾಯಿಗಳಲ್ಲಿ ಲಭ್ಯವಾಗಲಿದೆ.
 
ಮೊಬೈಲ್ ಕ್ಷೇತ್ರದಲ್ಲಿ ರೋಲ್ಸ್ ರಾಯ್ಸ್ ಎಂದೇ ಕರೆಯಲಾಗುವ ಸ್ಮಾರ್ಟ್‌ಫೋನ್‌ಗೆ ಸೋಲಾರಿನ್ ಎಂದು ಹೆಸರಿಸಲಾಗಿದ್ದು ಮಂಗಳವಾರದಂದು ಲಂಡನ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.
 
ಸೋಲಾರಿನ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 810 ಪ್ರೊಸೆಸರ್, ಭರವಸೆವುಳ್ಳ ಅತ್ಯುಚ್ಛ ವೈ-ಫೈ ಸಂಪರ್ಕ, 23.8 ಮೆಗಾ ಫಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ 5.5 ಇಂಚಿನ ಐಪಿಎಸ್ ಎಲ್‌ಇಡಿ 2-ಕೆ ರೆಸಲ್ಯೂಶನ್ ಸ್ಕ್ರೀನ್ ಹೊಂದಿದೆ.
 
ಈ ಆವೃತ್ತಿಯ ಪೋನ್‌ಗಳು ಅತ್ಯಾಧುನಿಕ ಗೌಪ್ಯತೆ ತಂತ್ರಜ್ಞಾನ ಹೊಂದಿದ್ದು, ಪ್ರಸ್ತುತ ಅಧಿಕೃತ ಮಳಿಗೆಯಲ್ಲಿ ಮಾತ್ರ ಲಭ್ಯವಾಗಲಿದೆ. ಇಸ್ರೇಲಿ ಜಂಟಿ ಸಹಭಾಗಿತ್ವದ ಕಂಪೆನಿಯಾದ ಸಿರಿನ್, ಸಂವಹನ ಭದ್ರತಾ ಸಂಸ್ಥೆಯಾದ ಕೂಲ್‌ಸ್ಪಾನ್ ಸಂಸ್ಥೆಯೊಂದಿಗೆ ಕೈಜೊಡಿಸಿದೆ.
 
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಅತಿ ಗೌಪ್ಯತೆಯ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಜಗತ್ತಿನ ಎಲ್ಲಾ ಸ್ಮಾರ್ಟ್‌ಪೋನ್‌ಗಳಿಗಿಂತ ವೇಗವಾಗಿ ಕಾರ್ಯನಿರ್ವಹಿಲಿದ್ದು, ಜಗತ್ತಿನ ಅತ್ಯುತ್ತಮ ವಸ್ತುಗಳಿಂದ ಈ ಪೋನ್‌ಗಳನ್ನು ಸಿದ್ದಪಡಿಸಲಾಗಿದೆ ಎಂದು ಸಿರಿನ್ ಲ್ಯಾಬ್ ಮಾಹಿತಿ ನೀಡಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments