ಫೋನ್ ರಾಡಾರ್ ವರದಿಯ ಪ್ರಕಾರ, ವಾಟ್ಸಪ್ ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯದ "ಕಾಲ್ ಬ್ಯಾಕ್" ಬಟನ್‌ನ್ನು ಪರಿಚಯಿಸುತ್ತಿದೆ. ಈ ಹೊಸ ವೈಶಿಷ್ಟ್ಯ ಮಿಸ್ಡ್ ಕಾಲ್ ಜೊತೆಗೆ ಕಾಲ್ ಬ್ಯಾಕ್ ಅಧಿಸೂಚನೆಯನ್ನು ಪ್ರಸ್ತುತ ಪಡಿಸಲಿದ್ದು, ಬಳಕೆದಾರರು ವಾಟ್ಸಪ್ ತೆರೆಯದೆ ಮರು ಕರೆ ಮಾಡಲು ಸಹಕಾರಿಯಾಗಿದೆ.
ವಾಟ್ಸಪ್ ಐಒಎಸ್ ಬಳಕೆದಾರರಿಗೆ ವಾಯ್ಸ್‌ಮೇಲ್ ವೈಶಿಷ್ಟ್ಯವನ್ನು ಪರಿಚಯಿಸುತ್ತಿದ್ದು, ಈ ವೈಶಿಷ್ಟ್ಯದಿಂದ ವೈಸ್‌ಮೇಲ್ ಕಳುಹಿಸಲು 'ರೆಕಾರ್ಡ್ ವಾಯ್ಸ್‌ಮೇಲ್' ಮತ್ತು 'ಸೆಂಡ್ ವಾಯ್ಸ್‌ಮೇಲ್' ಬಟನ್‌ನ್ನು ಪರಿಚಯಿಸುತ್ತಿದ್ದು, ಬಳಕೆದಾರರು ಕರೆಯಲ್ಲಿ ನಿರತರಾಗಿದ್ದಾಗಲೇ ವಾಯ್ಸ್‌ಮೇಲ್ ಕಳುಹಿಸಬಹುದಾಗಿದೆ.
ವಾಟ್ಸಪ್ ಮುಂಬರುವ ದಿನಗಳಲ್ಲಿ ಝಿಪ್ ಫೈಲ್ ವೈಶಿಷ್ಟ್ಯವನ್ನು ಪರಿಚಯಿಸಲಿದ್ದು, ದೊಡ್ಡ ಗಾತ್ರದ ಕಡತಗಳನ್ನು ಕಾಂಪ್ರೇಸ್ ಮಾಡುವ ಮೂಲಕ ಸಣ್ಣ ಗಾತ್ರಕ್ಕೆ ವರ್ಗಾವಣೆ ಮಾಡಬಹುದಾಗಿದೆ. ಈ ಮೂಲಕ ವಾಟ್ಸಪ್ ಪಿಡಿಎಫ್, ವಿಸಿಎಫ್, ಡಿಒಸಿಎಕ್ಸ್ ಕಡತಗಳಿಗೆ ಸ್ಪಂದಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ