ಬೆಂಗಳೂರು : ಕೇಂದ್ರ ಬಜೆಟ್ 2021 ರ ಸಮಯದಲ್ಲಿ, ಹಣಕಾಸು ಸಚಿವಾಲಯವು ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಟಿಡಿಎಸ್ ಫೈಲ್ ಮಾಡದವರಿಗೆ ಹೆಚ್ಚಿನ ದರದಲ್ಲಿ ಹಣ ಕಡಿತಗೊಳಿಸಲಾಗುತ್ತದೆ. ಆದಾಯದ ನಿರ್ದಿಷ್ಟ ಸ್ವರೂಪವನ್ನು ಹೊಂದಿರುವ ಪ್ರಕರಣಗಳ ಮೇಲೆ ಹೆಚ್ಚಿನ ದರದಲ್ಲಿ ಟಿಡಿಎಸ್ ಅನ್ನು ಕಡಿತಗೊಳಿಸಲು ಹೊಸ ಸೆಕ್ಷನ್ 206 ಎಬಿ ಅನ್ನು ಬಜೆಟ್ 2021 ರಲ್ಲಿ ಪರಿಚಯಿಸಲಾಗಿದೆ.
ಈ ಹಿನ್ನೆಲೆ ಜುಲೈ ತಿಂಗಳಿನಿಂದ ಒಂದು ನಿರ್ದಿಷ್ಟ ವರ್ಗಕ್ಕೆ ಒಳಪಟ್ಟರೆ ಹೆಚ್ಚಿನ ದರದಲ್ಲಿ ಟಿಡಿಎಸ್ ಅನ್ನು ಕೆಲವು ತೆರಿಗೆದಾರರು ಪಾವತಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಹೆಚ್ಚಿನ ದರದಲ್ಲಿ ಟಿಡಿಎಸ್ ಪಾವತಿಸಬೇಕು ಅನ್ನೋ ಅನುಮಾನ ನಿಮಗೂ ಇದ್ಯಾ..? ಈ ಬಗ್ಗೆ ನಿಮ್ಮ ಅನುಮಾನಗಳಿಗೆ ಕೆಳಗೆ ವಿವರ ನೀಡಲಾಗಿದೆ.
ಯಾರು ಹೆಚ್ಚಿನ ದರದಲ್ಲಿ ಟಿಡಿಎಸ್ ಪಾವತಿಸಬೇಕು..?