Select Your Language

Notifications

webdunia
webdunia
webdunia
webdunia

ವೊಡಾಫೋನ್ ಹೊಸ ಆಫರ್ ಅನ್‍ಲಿಮಿಟೆಡ್ ಕರೆಗಳು

ವೊಡಾಫೋನ್ ಹೊಸ ಆಫರ್ ಅನ್‍ಲಿಮಿಟೆಡ್ ಕರೆಗಳು
New Delhi , ಶನಿವಾರ, 10 ಡಿಸೆಂಬರ್ 2016 (10:43 IST)
ರಿಲಯನ್ಸ್ ಜಿಯೋಗೆ ಹೊಡೆತ ನೀಡಲು ಅದರೊಂದಿಗೆ ಸ್ಪರ್ಧಿಸಲು ಟೆಲಿಕಾಂ ಕಂಪನಿಗಳು ಟೊಂಕಕಟ್ಟಿ ನಿಂತಿವೆ. ಒಂದಾದ ಮೇಲೊಂದರಂತೆ ಆಫರ್ ಗಳನ್ನು ಕೊಡುತ್ತಿವೆ. ಇದೀಗ ವೊಡಫೋನ್ ಸಹ ಅದೇ ದಾರಿಯಲ್ಲಿ ಹೆಜ್ಜೆ ಹಾಕಿದೆ.
 
ಎರ್‍‌ಟೆಲ್, ಐಡಿಯಾ ಈಗಾಗಲೆ ಹಲವು ಆಫರ್‌ಗಳನ್ನು ತನ್ನ ಗ್ರಾಹಕರಿಗೆ ಪ್ರಕಟಿಸಿದೆ. ಇದೀಗ ವೊಡಾಫೋನ್ ಸಹ ತನ್ನ ಬಳಕೆದಾರರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ರೂ. 144ಕ್ಕೆ ರೀಚಾರ್ಜ್ ಮಾಡಿಕೊಂಡರೆ ಅನಿಯಮಿತ ಕರೆಗಳನ್ನು ಮಾಡುವ ಆಫರ್ ಪ್ರಕಟಿಸಿದೆ.
 
ರೂ.144 ಮತ್ತು ಅಧಿಕ ಮೊತ್ತದ ರೀಚಾರ್ಜ್‌ಗೆ ಅನಿಯಮಿತ ಕರೆಗಳು, ವೊಡಾಫೋನ್ ನೆಟ್‍ವರ್ಕ್ ವ್ಯಾಪ್ತಿಯಲ್ಲಿ ಉಚಿತ ರೋಮಿಂಗ್ ಸೌಲಭ್ಯ ನೀಡುತ್ತಿದೆ. ಇದರ ಜೊತೆಗೆ 50 ಎಂಬಿ ಡಾಟಾ ಕೂಡ ಉಚಿತವಾಗಿ ನೀಡುತ್ತಿದೆ. 
 
ಇನ್ನು ರೂ.344ಕ್ಕೆ ರೀಚಾರ್ಜ್‍ಗೆ ಉಚಿತ ಕರೆಗಳು, ಇತರೆ ನೆಟ್‌ವರ್ಕ್‌ಗೆ ಉಚಿತ ರೋಮಿಂಗ್, 4ಜಿ ಹ್ಯಾಂಡ್‌ಸೆಟ್ ಬಳಕೆದಾರರಿಗೆ 1ಜಿಬಿ ಉಚಿತ ಡಾಟಾ ಕೊಡಲಿರುವುದಾಗಿ ವೊಡಾಫೋನ್ ಪ್ರಕಟಣೆಯಲ್ಲಿ ತಿಳಿಸಿದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ರು.500 ನೋಟಿನ ಮೇಲೆ ಇದು ಇರುವುದಿಲ್ಲ