ಸ್ಮಾರ್ಟ್‌ಪೋನ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಕೋರಿಯಾ ಮೂಲದ ದೈತ್ಯ ಸ್ಮಾಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್. ಹೊಸ ಯೋಜನೆಯನ್ನು ರೂಪಿಸಿದ್ದು, ಗ್ರಾಹಕರಿಗೆ ಈ ಯೋಜನೆ ಅಡಿಯಲ್ಲಿ ಒಂದು ಹಂತದ ಪೋನ್‌ಗಳನ್ನು ಕೇವಲ 1 ರೂಪಾಯಿಗೆ ನೀಡಲಿದೆ.
ಸ್ಯಾಮ್‌ಸಂಗ್ ಸಂಸ್ಥೆಯ ಹೊಸ ಯೋಜನೆ ಅಡಿಯಲ್ಲಿ ಗ್ರಾಹಕರು 12 ಸರಳ ಇಎಮ್‌ಐ ಮೂಲಕ ಸ್ಮಾರ್ಟ್‌ಪೋನ್‌ಗಳನ್ನು ಪಡೆಯಬಹುದಾಗಿದ್ದು, ಜೊತೆಗೆ ಕ್ಯಾಶ್ ಬ್ಯಾಕ್ ಮತ್ತು ಹೆಚ್ಚು ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಈ ಯೋಜನೆ ಅಡಿ, 49,900 ಮುಖ ಬೆಲೆಯ ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್-6 ಸ್ಮಾರ್ಟ್‌ಪೋನ್ ಕೇವಲ 33,900 ರೂಪಾಯಿಗೆ ಲಭ್ಯವಾಗಲಿದ್ದು, 53,900 ಮುಖ ಬೆಲೆಯ ಗೆಲಾಕ್ಸಿ ನೋಟ್-5 ಆವೃತ್ತಿ 42,900 ರೂಪಾಯಿಗಳಿಗೆ ಲಭ್ಯವಿದೆ. ಜೊತೆಗೆ ಈ ಎರಡು ಆವೃತ್ತಿಯ ಪೋನ್‌ಗಳ ಮೇಲೆ 10 ಪ್ರತಿಶತ ಕ್ಯಾಶ್ ಬ್ಯಾಕ್ ಲಭ್ಯವಿದೆ.
ಗೆಲಾಕ್ಸಿ ಎ-7 ಆವೃತ್ತಿಯ ಸ್ಮಾರ್ಟ್‌ಪೋನ್ 29,900 ರೂಪಾಯಿ, ಗೆಲಾಕ್ಸಿ ಎ-5 ಆವೃತ್ತಿ 24,900 ರೂಪಾಯಿ ಮತ್ತು ಗ್ಯಾಲಕ್ಸಿ ಗ್ರ್ಯಾಂಡ್ ಪ್ರೈಮ್ 4ಜಿ ಆವೃತ್ತಿಗಳು 8,250 ರೂಪಾಯಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಈ ಹೊಸ ಇಎಮ್‌ಐ ಸೌಲಭ್ಯದ ಅಡಿಯಲ್ಲಿ ಸ್ಯಾಮ್‌ಸಂಗ್ ಉತ್ಪನ್ನಗಳಾದ ಯುಎಚ್‌ಡಿ ಫ್ಲ್ಯಾಟ್ ಸ್ಮಾರ್ಟ್ ಟಿವಿ, ಫುಲ್-ಎಚ್‌ಡಿ ಕರ್ವಡ್ ಟಿವಿ ಮತ್ತು ಫುಲ್ ಎಚ್‌ಡಿ ಫ್ಲ್ಯಾಟ್ ಟಿವಿಗಳು ಲಭ್ಯವಿದ್ದು, ಮತ್ತು ಎಸಿಸ್, ಟ್ಯಾಬ್ಲೆಟ್, ಮೈಕ್ರೋವೇವ್ ಓವನ್ಸ್ ಮತ್ತು ರೆಫ್ರಿಜರೇಟರ್‌ಗಳು ಕ್ಯಾಶ್ ಬ್ಯಾಕ್ ಸೌಲಭ್ಯದಲ್ಲಿ ಗ್ರಾಹಕರಿಗೆ ಲಭ್ಯವಿದೆ.