ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ, 4ಜಿ ಸೇವೆಯನ್ನು ಸಕ್ರೀಯಗೊಳಿಸಿಕೊಂಡ ಪ್ರಿಪೇಡ್ ಸಿಡಿಎಂಎ ಚಂದಾದಾರರಿಗೆ ಕೇವಲ 75 ರಿಂದ 97 ರೂಪಾಯಿಗಳಲ್ಲಿ 10 ಜಿಬಿ ಡೇಟಾ ಸೇವೆಯನ್ನು ನೀಡಲಿದೆ.
ಈ ಸೇವೆಯನ್ನು ಸಕ್ರೀಯಗೊಳಿಸಿಕೊಂಡ ಚಂದಾದಾರರಿಗೆ 150 ಉಚಿತ ಕರೆ ಮತ್ತು ನೆಟ್ ಕಾಲಿಂಗ್‌ನ್ನು ಸೇವೆಯನ್ನು ಪಡೆಯಬಹುದು.
ಭಾರತೀಯ ಏರಟೆಲ್, 4ಜಿ ಪ್ರಿಪೇಡ್ ಗ್ರಾಹಕರಿಗೆ 1,877 ರೂಪಾಯಿಗಳಿಗೆ 10 ಜಿಬಿ ಡೇಟಾ ಸೇವೆ ನೀಡತಿದ್ದು, ಐಡಿಯಾ ಸೆಲ್ಯುಲರ್ 1249 ರೂಪಾಯಿಗಳಿಗೆ 10 ಜಿಬಿ ಡೇಟಾ ಸೇವೆ ನೀಡುತ್ತದೆ.
ಪ್ರಸಕ್ತವಾಗಿ ರಿಲಯನ್ಸ್ ಈ ಯೋಜನೆಯನ್ನು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ (ಪೂರ್ವ), ಯುಪಿ (ಪಶ್ಚಿಮ), ಮಧ್ಯಪ್ರದೇಶ, ಮುಂಬೈ, ಗುಜರಾತ್, ದೆಹಲಿ ಮತ್ತು ಕೋಲ್ಕತಾಗಳಲ್ಲಿ ಅನಾವರಣಗೊಳಿಸಿದೆ.