Select Your Language

Notifications

webdunia
webdunia
webdunia
webdunia

ಕಟ್ಟುನಿಟ್ಟಾದ ನಿಯಮ ಪಾಲಿಸುವಂತೆ ತಂಬಾಕು ಉದ್ಯಮಿಗಳಿಗೆ ಸುಪ್ರೀಂ ಸೂಚನೆ

ಕಟ್ಟುನಿಟ್ಟಾದ ನಿಯಮ ಪಾಲಿಸುವಂತೆ ತಂಬಾಕು ಉದ್ಯಮಿಗಳಿಗೆ ಸುಪ್ರೀಂ ಸೂಚನೆ
ನವದೆಹಲಿ , ಬುಧವಾರ, 4 ಮೇ 2016 (14:37 IST)
ಸಿಗರೇಟ್ ಪ್ಯಾಕಿಂಗ್ ಮೇಲೆ ಆರೋಗ್ಯದ ಕುರಿತಾದ ಎಚ್ಚರಿಕೆ ಚಿತ್ರಕ್ಕೆ 85% ಜಾಗವನ್ನು ಮೀಸಲಿಡಬೇಕೆಂಬ ಕೇಂದ್ರ ಸರಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಈ ಕುರಿತ ಅರ್ಜಿಗಳನ್ನು ಆಯಾ ರಾಜ್ಯದ ಹೈಕೋರ್ಟ್‌ಗಳು ಪರಿಶೀಲಿಸಬೇಕು ಎಂದು ಆದೇಶಿಸಿದೆ.
 
ಪ್ರಸಕ್ತ ಚಾಲ್ತಿಯಲ್ಲಿರುವ ನಿಯಮಗಳನ್ನು ತಂಬಾಕು ಕಂಪನಿಗಳು ಉಲ್ಲಂಘಿಸುವಂತಿಲ್ಲ ಎಂದು ನ್ಯಾಯಾಧೀಶರ ಪೀಠ ಸೂಚನೆ ನೀಡಿದ್ದು, ಈ ಕುರಿತ ಅರ್ಜಿಗಳನ್ನು ಪರಿಶೀಲಿಸುವಂತೆ ಕರ್ನಾಟಕ ರಾಜ್ಯ ಹೈಕೋರ್ಟ್‌‌ಗೆ ಸೂಚನೆ ನೀಡಿದೆ.
 
ಕಳೆದು ತಿಂಗಳು, ಸಿಗರೇಟ್ ಪ್ಯಾಕಿಂಗ್ ಮೇಲೆ ಆರೋಗ್ಯ ಎಚ್ಚರಿಕೆ ಚಿತ್ರಕ್ಕೆ 85% ಜಾಗವನ್ನು ಮೀಸಲಿಡಬೇಕೆಂಬ ಕೇಂದ್ರ ಸರಕಾರ ಸೂಚನೆಯನ್ನು ವಿರೋಧಿಸಿ ಐಟಿಸಿ ಸೇರಿದಂತೆ ಪ್ರಮುಖ ಸಿಗರೇಟ್ ತಯಾರಿಕಾ ಸಂಸ್ಥೆಗಳಾದ ಗಾಡ್ಫ್ರೇ ಫಿಲಿಪ್ಸ್ ಮತ್ತು ವಿಎಸ್‌ಟಿ ಸಂಸ್ಥೆಗಳು ಸಿಗರೇಟ್ ಉತ್ಪಾದನೆ ಸ್ಥಗಿತಗೊಳಿಸಿ ಕಾರ್ಖಾನೆ ಮುಚ್ಚಲು ನಿರ್ಧರಿಸಿದ್ದವು.
 
ಸಿಗರೇಟ್ ಪ್ಯಾಕಿಂಗ್ ಮೇಲೆ ಆರೋಗ್ಯ ಎಚ್ಚರಿಕೆ ಚಿತ್ರಕ್ಕೆ 85% ಜಾಗವನ್ನು ಮೀಸಲಿಡಬೇಕೆಂಬ ಕೇಂದ್ರ ಸರಕಾರ ಸೂಚನೆಯನ್ನು ವಿರೋಧಿಸಿ ಸಿಗರೆಟ್ ತಯಾರಕಾ ಸಂಸ್ಥೆಗಳು ಕೋರ್ಟ್‌ ಮೋರೆ ಹೊಗಿದ್ದವು.

ಬಿಎಮ್‌ಜೆ ಗ್ಲೋಬಲ್ ಹೆಲ್ತ್ ಪ್ರಕಾರ, ಭಾರತದಲ್ಲಿ ಧೂಮಪಾನದಿಂದ ಪ್ರತಿ ವರ್ಷ 1 ಮಿಲಿಯನ್ ಜನರು ಸಾವನ್ನಪುತ್ತಿದ್ದಾರೆ. ಭಾರತ  ತಂಬಾಕು ಉತ್ಪನಗಳ ಮೂಲಕ ಪ್ರತಿ ವರ್ಷ 16 ಬಿಲಿಯನ್ ಆದಾಯವನ್ನು ಸಂಗ್ರಹಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಾನೇನು ಮಾಡಲಿ, ಅವರನ್ನು ಗಲ್ಲಿಗೇರಿಸಲೇ: ಸ್ಪೀಕರ್ ಮಹಾಜನ್ ಪ್ರಶ್ನೆ