Select Your Language

Notifications

webdunia
webdunia
webdunia
webdunia

ಆರ್‌ಬಿಐ ಗವರ್ನರ್ ಅಧಿಕಾರವಧಿ 3 ವರ್ಷ ಸಾಲದು: ರಘುರಾಮ್ ರಾಜನ್

ಆರ್‌ಬಿಐ
ನವದೆಹಲಿ , ಶುಕ್ರವಾರ, 1 ಜುಲೈ 2016 (15:06 IST)
ಆರ್‌ಬಿಐ ಗವರ್ನರ್ ರಘುರಾಂ ರಾಜನ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 4 ರಂದು ಕೊನೆಗೊಳ್ಳುತ್ತಿದ್ದು, ಈಗಾಗಲೇ ಅವರು ಎರಡನೇಯ ಅವಧಿಗೆ ಆರ್‌ಬಿಐ ಗವರ್ನರ್ ಅಧಿಕಾರ ಸ್ವೀಕರಿಸುವುದಿಲ್ಲ ಎಂದು ಸ್ವಷ್ಟಪಡಿಸಿದ್ದಾರೆ.
 
ಆರ್‌ಬಿಐ ಗವರ್ನರ್ ರಾಘುರಾಂ ರಾಜನ್ ಅವರ ಅಧಿಕಾರಾವಧಿ ಇನ್ನೂ ಒಂಬತ್ತು ವಾರಗಳಲ್ಲಿ ಮುಕ್ತಾಯವಾಗಲಿದ್ದು, 
 
ಸಂಸದೀಯ ಸ್ಥಾಯಿ ಸಮಿತಿ ಮತ್ತು ಬ್ಯಾಂಕುಗಳಿಗೆ ಮಾರ್ಗದರ್ಶಿಯಾಗಿದ್ದ ರಾಘುರಾಂ ರಾಜನ್ ಅವರಿಗೆ ಸದಸ್ಯರು ಆರ್‌ಬಿಐ ಅಧಿಕಾರಾವಧಿ ಕುರಿತು ಪ್ರಶ್ನೆ ಕೇಳಿದರು
 
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಆರ್‌ಬಿಐ ಗವರ್ನರ್ ರಾಘುರಾಂ ರಾಜನ್, ಮೂರು ವರ್ಷದ ಅಧಿಕಾರಾವಧಿ ಅತೀ ಕಡಿಮೆ ಎನ್ನಿಸುತ್ತದೆ ಎಂದು ತಿಳಿಸಿದರು.
 
ಆರ್‌ಬಿಐ ಗವರ್ನರ್ ಅಧಿಕಾರಾವಧಿಯನ್ನು ಮೂರರಿಂದ ಐದು ವರ್ಷಕ್ಕೆ ಹೆಚ್ಚಳ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಅಮೆರಿಕಾ ರಿಸರ್ವ್ ಬ್ಯಾಂಕಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ 4 ವರ್ಷಕ್ಕೆ ನಿಗದಿಪಡಿಸಿದ್ದು, ಅವರ ಅಧಿಕಾರಾವಧಿಯನ್ನು ಮುಂದಿನ ಅವಧಿಗೆ ವಿಸ್ತರಿಸಲು ಕಾನೂನಿನಲ್ಲಿ ಅವಕಾಶವಿದೆ.
 
ಆರ್‌ಬಿಐ ಗವರ್ನರ್ ರಾಘುರಾಂ ರಾಜನ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 4 ರಂದು ಕೊನೆಗೊಳ್ಳುತ್ತಿದ್ದು, ಈಗಾಗಲೇ ಅವರು ಎರಡನೇಯ ಅವಧಿಗೆ ಆರ್‌ಬಿಐ ಗವರ್ನರ್ ಅಧಿಕಾರ ಸ್ವೀಕರಿಸುವುದಿಲ್ಲ ಎಂದು ಸ್ವಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರಕ್ಕೆ ವಿರೋಧ: ಕೆ.ಎಸ್.ಈಶ್ವರಪ್ಪ