Select Your Language

Notifications

webdunia
webdunia
webdunia
Friday, 11 April 2025
webdunia

ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿವೆಯೇ ಕಾದಿದೆ ಆಪತ್ತು...!

ಮೊಬೈಲ್ ಅಪ್ಲಿಕೇಶನ್

ಗುರುಮೂರ್ತಿ

ಬೆಂಗಳೂರು , ಸೋಮವಾರ, 12 ಫೆಬ್ರವರಿ 2018 (17:21 IST)
ನೀವು ಆಂಡ್ರಾಯ್ಡ್ ಬಳಕೆದಾರರೇ ನಿಮ್ಮ ಮೊಬೈಲ್‌ಗಳನ್ನು ಹ್ಯಾಕ್ ಮಾಡುತ್ತಿರಬಹುದು ಎಚ್ಚರ, ಹೀಗಂತ ಗೂಗಲ್ ಸಂಸ್ಥೆ ಹೇಳಿದ್ದು ಅದು ತನ್ನ ಪ್ಲೇ ಸ್ಟೋರ್‌ನಲ್ಲಿರುವ 22 ಆಪ್‌ಗಳನ್ನು ಬಳಸದಂತೆ ಗ್ರಾಹರಿಗೆ ಸೂಚಿಸಿದೆ.
ಹೌದು, ಈ ಆಪ್‌ಗಳನ್ನು ಹ್ಯಾಕರ್‌ಗಳು ತಯಾರಿಸಿದ್ದು ಇದನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್ ಮಾಡುತ್ತಿದ್ದಂತೆಯೇ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿಗಳು ಹ್ಯಾಕರ್‌ಗಳ ಕೈ ಸೇರಲಿವೆ ಎಂದು ಗುಗಲ್ ಹೇಳಿದೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌‌ನಲ್ಲಿರುವ ಇಂತಹ ಆಪ್‌ಗಳನ್ನು ಸೈಬರ್‌ಸೆಕ್ಯೂರಿಟಿ ಸ್ವಾಫ್ಟ್‌ವೆರ್ ಕಂಪನಿ ಪಟ್ಟಿ ಮಾಡಿದ್ದು, ಈ ಕೆಳಗಂಡ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿ ಇದ್ದಲ್ಲಿ ಕೂಡಲೇ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ ಎಂದು ಸಂಸ್ಥೆ ತಿಳಿಸಿದೆ.
 
ಈ ಅಪ್ಲಿಕೇಶನ್‌ಗಳು ನಿಮಗೆ ಗೊತ್ತಿಲ್ಲದೇ ನಿಮ್ಮ ಮೊಬೈಲ್‌ನಲ್ಲಿರುವ ಸಂಪರ್ಕಗಳು, ಸಂದೇಶಗಳು ಮತ್ತು ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿಗಳು ಇಲ್ಲವೇ ನಿಮ್ಮ ಮೊಬೈಲ್‌ನಲ್ಲಿರುವ ಗೌಪ್ಯ ಮಾಹಿತಿಯನ್ನು ಹಾಗೂ ನಿಮ್ಮ ಇತರ ಮೊಬೈಲ್ ಚಟುವಟಿಕೆಗಳ ಕುರಿತ ಮಾಹಿತಿಯನ್ನು ರವಾನಿಸುವ ತಂತ್ರಜ್ಞಾನವನ್ನು ಹೊಂದಿದ್ದು, ನಿಮ್ಮ ಮೊಬೈಲ್‌ನ ಬ್ಯಾಟರಿ ಸಾಮರ್ಥ್ಯ ಸೇರಿದಂತೆ ನಿಮ್ಮ ಆಂಡ್ರೊಯ್ಡ್ ಅನ್ನು ಹಾಳುಗೆಡುವುದರೊಂದಿಗೆ ನಿಮ್ಮ ಮೊಬೈಲ್‌ಗಳನ್ನು ಹಾಳುಮಾಡಲಿದೆ ಎಂದು ವರದಿಯಲ್ಲಿ ತಿಳಿಸಿದೆ.
 
ಹಾಗಾದರೆ ಆ ಅಪ್ಲಿಕೇಶನ್‌ಗಳು ಯಾವುವು ಎಂಬ ಕೂತೂಹಲ ನಿಮಗೂ ಇರಬಹುದು. ಆದ ಕಾರಣ ಆ ಅಪ್ಲಿಕೇಶನ್‌ಗಳ ಹೆಸರನ್ನು ಇಲ್ಲಿ ನೀಡಲಾಗಿದೆ. ಅದ್ಯಾವುದೆಂದರೆ, ಸ್ಮಾರ್ಟ್ ಸ್ವೈಪ್, ರಿಯಲ್‌ಟೈಮ್ ಬೂಸ್ಟರ್‌, ಫೈಲ್ ಟ್ರಾನ್ಸ್‌ಫರ್ ಪ್ರೋ, ನೆಟ್‌ವರ್ಕ್ ಗಾರ್ಡ್, ಎಲ್‌ಇಡಿ ಫ್ಲಾಶ್‌ಲೈಟ್‌, ವೈಸ್ ರೆಕಾರ್ಡರ್ ಪ್ರೋ, ಫ್ರೀ ವೈಫೈ ಪ್ರೋ, ಕಾಲ್ ರೆಕಾರ್ಡರ್ ಪ್ರೋ, ಕಾಲ್ ರೆಕಾರ್ಡರ್‌, ರಿಯಲ್ ಟೈಮ್ ಕ್ಲಿನರ್‌, ಸೂಪರ್ ಫ್ಲಾಶ್‌ಲೈಟ್‌, ವಾಲ್‌ಪೇಪರ್ ಎಚ್‌ಡಿ - ಬ್ಯಾಕ್‌ಗ್ರೌಂಡ್‌, ಕೂಲ್ ಫ್ಲಾಶ್‌ಲೈಟ್‌, ಮಾಸ್ಟರ್‌ ವೈಫೈ ಕೀ, ವೈಫೈ ಸೆಕ್ಯೂರಿಟಿ ಮಾಸ್ಟರ್ - ವೈಫೈ ಅನಲೈಸರ್, ಸ್ಪೀಡ್ ಟೆಸ್ಟ್‌, ಫೀ ವೈಫೈ ಕನೆಕ್ಟ್, ಬ್ರೈಟೆಸ್ಟ್‌ ಎಲ್‌ಐಡಿ ಫ್ಲಾಶ್‌ಲೈಟ್, ಬ್ರೈಟೆಸ್ಟ್‌ ಫ್ಲಾಶ್‌ಲೈಟ್, ಕಾಲ್ ರೆಕಾರ್ಡಿಂಗ್ ಮ್ಯಾನೇಜರ್, ಫ್ರೀ ವೈಫೈ ಸ್ಮಾರ್ಟ್, ಬ್ರೈಟೆಸ್ಟ್ ಎಲ್‌ಇಡಿ ಫ್ಲಾಶ್‌ಲೈಟ್-ಪ್ರೋ‌, ಡಾ. ಕ್ಲಿನ್ ಲೈಟ್ ಮುಂತಾದವು.
 
ಒಂದು ವೇಳೆ ನಿಮ್ಮ ಮೊಬೈಲ್‌ನಲ್ಲಿ ಇಂತಹ ಅಪ್ಲಿಕೇಶನ್‌ಗಳಿದ್ದರೆ ಈ ಕೂಡಲೇ ಅದನ್ನು ತೆಗೆದುಹಾಕಿ ಅಷ್ಟೇ ಅಲ್ಲ ನೀವು ಗುಗಲ್ ಪ್ಲೇ ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಆ ಅಪ್ಲಿಕೇಶನ್ ಕುರಿತು ವಿವರವಾಗಿ ತಿಳಿದುಕೊಂಡು ಆನಂತರ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಅಷ್ಟೇ ಅಲ್ಲ ಮೊಬೈಲ್ ಸುರಕ್ಷತೆಗಾಗಿ ಯಾವಾಗಲೂ ಆಂಟಿವೈರಸ್ ಬಳಸುವುದನ್ನು ಮರೆಯದಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಪಲ್ ಬಿಡುಗಡೆಗೊಳಿಸುತ್ತಿದೆ ವೈರ್‌ಲೆಸ್ ಚಾರ್ಜರ್