Select Your Language

Notifications

webdunia
webdunia
webdunia
webdunia

ಸಣ್ಣ ಕಾರು ಟಾಟಾ ಟಿಯಾಗೋ ಇನ್ನು ಆಟೋಮೆಟಿಕ್

ಸಣ್ಣ ಕಾರು ಟಾಟಾ ಟಿಯಾಗೋ ಇನ್ನು ಆಟೋಮೆಟಿಕ್
New Delhi , ಮಂಗಳವಾರ, 7 ಮಾರ್ಚ್ 2017 (11:51 IST)
ಸಣ್ಣ ಕಾರು ಟಿಯಾಗೋ ಮಾಡೆಲನ್ನು ಆಟೋಮೆಟಿಕ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ (ಎಎಂಟಿ) ಆವೃತ್ತಿಯನ್ನು ಟಾಟಾ ಮೋಟಾರ್ಸ್ ಸೋಮವಾರ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.5.39 ಲಕ್ಷಗಳು (ಎಕ್ಸ್‌ ಶೋರೂಂ ದೆಹಲಿ). 
 
ಹೊಸ ಟಿಯಾಗೋ ಈಸಿ ಶಿಫ್ಟ್ ಎಎಂಟಿ ನಾಲ್ಕು ಗೇರ್ ಪೊಷಿಷನ್ (ಆಟೋಮೆಟಿಕ್, ನ್ಯೂಟ್ರಲ್, ರಿವರ್ಸ್, ಮ್ಯಾನ್ಯುಯಲ್) ನಲ್ಲಿ ಲಭ್ಯ. ಇದರಲ್ಲಿ ಎರಡು ಡ್ರೈವ್ ಮೋಡ್ (ಸ್ಫೋರ್ಟ್ಸ್, ಸಿಟಿ) ಸಹ ಇವೆ. ದೇಶದಲ್ಲಿ ಕಂಪೆನಿಗೆ ಸೇರಿದ 587 ಮಾರಾಟ ಮಳಿಗೆಗಳಲ್ಲಿ ಟಿಯಾಗೋ ಎಎಂಟಿ ಆವೃತಿ ಲಭಿಸಲಿದೆ ಎಂದು ಕಂಪೆನಿ ತಿಳಿಸಿದೆ.
 
"ಟಿಯಾಗೋಗೆ ಒಳ್ಳೆಯ ಪ್ರತಿಕ್ರಿಯೆ ಲಭಿಸುತ್ತಿದೆ. ಅಧಿಕ ಸ್ಪರ್ಧೆ ಇರುವ ಸಣ್ಣ ಕಾರು ವಿಭಾಗದಲ್ಲಿ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ" ಎಂದು ಟಾಟಾ ಮೋಟಾರ್ಸ್ ಅಧ್ಯಕ್ಷ ಮಾಯಾಂಕ್ ಪರೀಖ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯಾಕೆ ಮಾತಾಡಿಲ್ಲ ಗೊತ್ತಾ?!