Select Your Language

Notifications

webdunia
webdunia
webdunia
webdunia

ಪರಿಸರ ರಕ್ಷಣೆಗೆ ಸುಂದರ ಲ್ಯಾಂಡ್‍ಸ್ಕೇಪ್ ಅಗತ್ಯ

ಪರಿಸರ ರಕ್ಷಣೆಗೆ ಸುಂದರ ಲ್ಯಾಂಡ್‍ಸ್ಕೇಪ್ ಅಗತ್ಯ
New Delhi , ಗುರುವಾರ, 23 ಫೆಬ್ರವರಿ 2017 (19:18 IST)
ಒಂದು ಅತ್ಯುತ್ತಮ ಯೋಜನೆ ಸುಂದರವಾಗಿ ಕಾಣುವಂತಾಗಬೇಕಾದರೆ ಅದಕ್ಕೆ ಅತ್ಯದ್ಭುತವಾದ ಲ್ಯಾಂಡ್‍ಸ್ಕೇಪ್ ಹಾಲ್‍ಮಾರ್ಕ್ ಇದ್ದಂತೆ. ಸುಂದರವಾದ ಲ್ಯಾಂಡ್‍ಸ್ಕೇಪ್ ಒಂದು ಅಪಾರ್ಟ್‍ಮೆಂಟ್‍ನ ಉತ್ತಮ ಗಾಳಿ ಸೇವನೆಯ ತಾಣವಾಗುವುದಲ್ಲದೇ ಅದರ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಅಭಿವೃದ್ಧಿಯ ಸಂಕೇತವನ್ನೂ ತೋರಿಸುತ್ತದೆ. ನಗರದಲ್ಲಿ ಈ ಲ್ಯಾಂಡ್‍ಸ್ಕೇಪ್ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳನ್ನು ಖ್ಯಾತ ಲ್ಯಾಂಡ್‍ಸ್ಕೇಪ್ ಆರ್ಕಿಟೆಕ್ಟ್ ಆಗಿರುವ ಕಣ್ಣನ್ ಎಸ್. ಅವರು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
 
1.ಇತ್ತೀಚಿನ ದಿನಗಳಲ್ಲಿ ಲ್ಯಾಂಡ್‍ಸ್ಕೇಪಿಂಗ್ ಎದುರಿಸುತ್ತಿರುವ ಪ್ರಮುಖ ಸವಾಲುಗಳೇನು?
 
ಈಗಿನ ದಿನಗಳಲ್ಲಿ ನೀರು ಅತ್ಯಮೂಲ್ಯವಾದ ಉತ್ಪನ್ನವಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಸುಸ್ಥಿರ ಲ್ಯಾಂಡ್‍ಸ್ಕೇಪ್ ಅಭಿವೃದ್ಧಿಪಡಿಸುವುದೇ ಪ್ರಮುಖ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡ್‍ಸ್ಕೇಪ್ ಆರ್ಕಿಟೆಕ್ಟ್‍ಗಳು ಲ್ಯಾಂಡ್‍ಸ್ಕೇಪ್‍ಗಾಗಿ ಹೆಚ್ಚಾಗಿ ಮರಗಳನ್ನೇ ಬಳಸುತ್ತಿದ್ದಾರೆ. ಏಕೆಂದರೆ, ಅತ್ಯಂತ ಕಡಿಮೆ ನೀರು ಹೀರಿಕೊಂಡು ಬೆಳೆಯುತ್ತವೆ. ಅವುಗಳನ್ನು ನೆಟ್ಟು ನಾಲ್ಕು ವರ್ಷಗಳ ನಂತರ ನೀರಿನ ಹೆಚ್ಚು ಆಶ್ರಯವಿಲ್ಲದೇ ನಿರ್ವಹಣೆ ಮಾಡಬಹುದಾಗಿದೆ.
 
2.ಲ್ಯಾಂಡ್‍ಸ್ಕೇಪಿಂಗ್ ಪ್ರಯತ್ನಗಳಿಗೆ ಹವಾಮಾನ ಬದಲಾವಣೆ ಪರಿಣಾಮ ಬೀರುತ್ತಿದೆಯೇ?
 
ಇತ್ತೀಚಿನ ದಿನಗಳಲ್ಲಿ ನಗರಗಳು ಹೆಚ್ಚು ತಾಪಮಾನ ಹೊಂದಿರುವ ನಗರಗಳಾಗುತ್ತಿವೆ ಎಂಬುದನ್ನು ಎಲ್ಲರೂ ಅರಿತಿದ್ದಾರೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ ಬೆಂಗಳೂರು ನಗರದ ಹವಾಮಾನದಲ್ಲಿ ಭಾರೀ ಬದಲಾವಣೆ ಕಾಣುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಲ್ಯಾಂಡ್‍ಸ್ಕೇಪ್ ವಿನ್ಯಾಸಗೊಳಿಸುವುದು, ಅರ್ಥಪೂರ್ಣ ಮತ್ತು ಸುಸ್ಥಿರತೆ ಕಾಪಾಡುವಂತಿರಬೇಕಾದ ಅಗತ್ಯತೆ ಎದ್ದು ಕಾಣುತ್ತಿದೆ. ನೀರಿಲ್ಲದ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹಸಿರು ಲಾನ್‍ಗಳನ್ನು ಹಾಕುವುದು ಮತ್ತು ವಿದೇಶದಿಂದ ತಂದ ಗಿಡಗಳನ್ನು ನೆಡುವುದು ಬೇಜವಾಬ್ದಾರಿ ಎನಿಸುತ್ತದೆ.
 
ಸ್ಥಳೀಯವಾಗಿಯೇ ಲಭ್ಯವಿರುವ ಮರಗಳ ವಿವಿಧ ಪ್ರಬೇಧಗಳನ್ನು ನೆಟ್ಟರೆ ಅವು ನಮ್ಮ ವಾತಾವರಣಕ್ಕೆ ಹೊಂದಿಕೊಂಡು ಹವಾಮಾನ ಸುಸ್ಥಿರತೆಗೆ ನೆರವಾಗಬಲ್ಲವು. ಹೀಗೆ ಮಾಡಿದ್ದೇ ಆದಲ್ಲಿ ಹೊರಗಿನ ತಾಪಮಾನಕ್ಕಿಂತ ಕನಿಷ್ಟ 4-5 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ಕಡಿಮೆ ಮಾಡುವಂತೆ ಮಾಡುತ್ತವೆ ಈ ಸ್ಥಳೀಯ ಗಿಡ ಮರಗಳು.
 
3. ಯಾವುದಾದರೂ ಆಸಕ್ತಿದಾಯಕ ಲ್ಯಾಂಡ್‍ಸ್ಕೇಪಿಂಗ್ ಸದ್ಯದಲ್ಲೇ ಬರಲಿದೆಯೇ?
 
ನಗರದಲ್ಲಿ ಹೆಚ್ಚುತ್ತಿರುವ ನೀರಿನ ಕೊರತೆ, ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದಂತಹ ಸವಾಲುಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಲ್ಯಾಂಡ್‍ಸ್ಕೇಪ್ ಅತ್ಯಂತ ಗಂಭೀರವಾಗಿ ಶಿಸ್ತುಬದ್ಧವಾದ ವಿನ್ಯಾಸಕ್ಕೆ ಕೈ ಹಾಕಿದೆ. ಕಡಿಮೆ ನೀರು ಬಳಕೆ, ಸರಳವಾದ ನಿರ್ವಹಣೆ ಆಗುವಂತಹ ರೀತಿಯಲ್ಲಿ ಲ್ಯಾಂಡ್‍ಸ್ಕೇಪ್ ಅನ್ನು ವಿನ್ಯಾಸಗೊಳಿಸಲಾಗುತ್ತಿದ್ದು, ಈ ಮೂಲಕ ಪರಿಸರದಲ್ಲಿ ಸುಸ್ಥಿರತೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಹೆಚ್ಚು ಹೆಚ್ಚು ಸ್ಥಳೀಯ ಪ್ರಬೇಧದ ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಉಳಿಸುವ ಕೆಲಸವನ್ನು ಈ 
ವೈಜ್ಞಾನಿಕ ವಿನ್ಯಾಸದ ಲ್ಯಾಂಡ್‍ಸ್ಕೇಪ್ ಮೂಲಕ ಮಾಡಲಾಗುತ್ತಿದೆ.
 
4. ಸುಂದರವಾದ ಲ್ಯಾಂಡ್‍ಸ್ಕೇಪ್ ಬಗ್ಗೆ ನಡೆಸಿರುವ ಅಧ್ಯಯನದ ವಿವರಗಳನ್ನು ನೀಡುವಿರಾ?
 
ವೈಷ್ಣವಿ ಗ್ರೂಪ್ ತನ್ನ ವೈಷ್ಣವಿ ಗಾರ್ಡೇನಿಯಾದಲ್ಲಿ ಅತ್ಯಂತ ಸುಂದರವಾದ ಲ್ಯಾಂಡ್‍ಸ್ಕೇಪ್ ಮಾಡಿದೆ. ಈ ಗಾರ್ಡೇನಿಯಾದಲ್ಲಿ ಬೆಳೆದು ನಿಂತಿರುವ ಸುಂದರವಾದ ಹೂವು ಮತ್ತು ಹಸಿರು ನೋಡಿದಾಕ್ಷಣ ಇದು ಅಲಂಕಾರಿಕ ಎನಿಸಬಹುದು. ಆದರೆ, ಇದು ಎಂದಿಗೂ ಅಲಂಕಾರಿಕ ಆಗಲು ಸಾಧ್ಯವಿಲ್ಲ. ಏಕೆಂದರೆ, ಇಲ್ಲಿ ಪರಿಸರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಎಲ್ಲಾ ಸ್ಥಳೀಯ ಪ್ರಬೇಧಗಳ ಗಿಡ ಮರಗಳನ್ನು ಬೆಳೆಸಲಾಗಿದೆ. ಇಲ್ಲಿ ಅಗತ್ಯವಿದ್ದೆಡೆ ಮಾತ್ರ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಈ ಕಟ್ಟಡದ ಸುತ್ತಮುತ್ತ ಇರುವ ಗಿಡ ಮರಗಳ ಪ್ರಬೇಧಗಳ ಮರಗಳನ್ನೇ ಇಲ್ಲಿ ಬೆಳೆಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಶಾಸಕ ಪಿಳ್ಳಮುನಿಶಾಮಪ್ಪಗೆ ದೇವೇಗೌಡರ ಭರವಸೆ