Webdunia - Bharat's app for daily news and videos

Install App

ಮನೆ ಬಳಿಗೆ ನಗದು ಸ್ನಾಪ್‍ಡೀಲ್ ಬಂಪರ್ ಆಫರ್

Webdunia
ಶುಕ್ರವಾರ, 23 ಡಿಸೆಂಬರ್ 2016 (11:20 IST)
ಅಧಿಕ ಮೌಲ್ಯದ ನೋಟು ನಿಷೇಧದ ಬಳಿಕ ನೋಟಿನ ಕೊರತೆ ಎದುರುಗಾಗಿದೆ. ಈ ಸಮಸ್ಯೆಗೆ ಪರಿಹಾರ ಕೊಡಲು ಆನ್‌ಲೈನ್ ಮಾರುಕಟ್ಟೆ ದಿಗ್ಗಜ ಸ್ನಾಪ್‌ಡೀಲ್ ಬಂಪರ್ ಆಫರ್ ಪ್ರಕಟಿಸಿದೆ. "Cash@Home" ಸೇವೆ ಮೂಲಕ ಜನರ ಕನಿಷ್ಟ ಬೇಡಿಕೆಯ ನಗದನ್ನು ಮನೆಗೆ ತಲುಪಿಸುವುದಾಗಿ ತಿಳಿಸಿದೆ.
 
ಗುರುವಾರದಿಂದ ಈ ಸೇವೆ ಲಭ್ಯ ಎಂದಿದೆ ಕಂಪನಿ. ಬಳಕೆದಾರರ ವಿನಂತಿ ಮೇರೆಗೆ ಈ ಸೇವೆಯ ಮೂಲಕ ಗರಿಷ್ಠ ಒಂದು ಬುಕಿಂಗ್‍ಗೆ ರೂ.2,000ದ ವರೆಗೂ ನಗದನ್ನು ಸ್ನಾಪ್‌ಡೀಲ್ ಕಳುಹಿಸಿಕೊಡಲಿದೆ. ನಗದು ಡೆಲಿವರಿ ಮಾಡುವ ಸಮಯದಲ್ಲೇ ಬಳಕೆದಾರರು ತಮ್ಮ ಬ್ಯಾಂಕ್ ಎಟಿಎಂ ಕಾರ್ಡನ್ನು ಪಿಓಎಸ್ ಮೆಶಿನ್‌ನಲ್ಲಿ ಸ್ವೈಪ್ ಮಾಡಿ ಸ್ನಾಪ್‍ಡೀಲ್‍ಗೆ ಸಲ್ಲಿಸಬಹುದು. ಇದಕ್ಕಾಗಿ ನಾಮಮಾತ್ರ ಶುಲ್ಕ ರು.1ನ್ನು ಕಂಪನಿ ವಿಧಿಸಲಿದೆ.
 
ಬುಕಿಂಗ್ ಮಾಡುಕೊಂಡ ಸಮಯದಲ್ಲೇ ಈ ಶುಲ್ಕವನ್ನು ಡೆಬಿಟ್ ಕಾರ್ಡು ಅಥವಾ ಫ್ರೀಚಾರ್ಜ್ ಮೂಲಕ ಸಲ್ಲಿಸಬೇಕಾಗಿರುತ್ತದೆ ಎಂದು ಕಂಪನಿ ಹೇಳಿದೆ. ಈ ಸೇವೆ ಮೂಲಕ ಗಂಟೆಗಟ್ಟಲೆ ಬ್ಯಾಂಕ್ ಮುಂದೆ ನಿಲ್ಲುವ, ಎಟಿಎಂ ಮುಂದೆ ಯಾವುದೇ ಅವಸ್ಥೆಗಳನ್ನು ಎದುರಿಸದೆ ಸುಲಭವಾಗಿ ನಗದು ಸಿಗುವಂತೆ ಮಾಡುತ್ತೇವೆಂದಿದೆ. 
 
"Cash@Home" ಸೇವೆಯ ಮೂಲಕ ಬೇರೆ ಯಾವ ಆರ್ಡರನ್ನೂ ಸ್ನಾಪ್‌ಡೀಲ್ ಸ್ವೀಕರಿಸುವುದಿಲ್ಲ. ಗುರ್ಗಾವ್, ಬೆಂಗಳೂರಿನಲ್ಲಿ ಈಗಾಗಲೆ ಕಂಪನಿ ಲೈವಾಗಿ ಈ ಸೇವೆಯನ್ನು ಪ್ರಾರಂಭಿಸಿದೆ. ಇನ್ನುಳಿದ ಪ್ರಮುಖ ನಗರಗಳಲ್ಲೂ ಶೀಘ್ರದಲ್ಲೇ ಈ ಸೇವೆಯನ್ನು ತರಲಿರುವುದಾಗಿ ಸ್ನಾಪ್‌ಡೀಲ್ ಹೇಳಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೈರತಿ ಬಸವರಾಜು ವಿರುದ್ಧ ಪೊಲೀಸರೇ ಹೆಸರು ಸೇರಿಸಿಕೊಂಡಿದ್ದಾರೆ: ಆರ್ ಅಶೋಕ್

Arecanut price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿ ಬೆಲೆ ಇಳಿಮುಖದತ್ತ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೆಮ್ಮಿದಾಗ ಎದೆನೋವಾಗುತ್ತಿದ್ದರೆ ಏನರ್ಥ

ರಾಬರ್ಟ್ ವಾದ್ರಾ ವಿರುದ್ಧ ಇಡಿ ಚಾರ್ಜ್ ಶೀಟ್: ಮುಗಿಬಿದ್ದ ಕಾಂಗ್ರೆಸ್ ನಾಯಕರು

ಮುಂದಿನ ಸುದ್ದಿ
Show comments