ನವದೆಹಲಿ: ತಾಯಿಯ ಅಂತ್ಯ ಸಂಸ್ಕಾರ ವಿಧಿ, ವಿಧಾನದಲ್ಲಿ ಪಾಲ್ಗೋಳುವ ಹಿನ್ನೆಲೆಯಲ್ಲಿ ಸಹರಾ ಮುಖ್ಯಸ್ಥ ಸುಬ್ರತೊ ರಾಯ್ ಅವರಿಗೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಷರತ್ತು ಬದ್ಧ ಪೆರೋಲ್ ಮಂಜೂರು ಮಾಡಿದೆ.
ಸಹರಾ ಮುಖ್ಯಸ್ಥ ಸುಬ್ರತೊ ರಾಯ್ ಅವರ ತಾಯಿ ಛಬಿ ರಾಯ್ (95) ಅವರು ಅನಾರೋಗ್ಯದ ಕಾರಣ ಶುಕ್ರವಾರ ಲಖನೌದಲ್ಲಿ ನಿಧನರಾಗಿದ್ದಾರೆ. ಈ ವಿಚಾರ ಕುರಿತು ಸುಬ್ರತೊ ರಾಯ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು, ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ನ್ಯಾಯಮೂರ್ತಿ ಎ.ಆರ್.ದವೆ ಮತ್ತು ನ್ಯಾಯಮೂರ್ತಿ ಎ.ಕೆ. ಸಿಕ್ರಿ ಒಳಗೊಂಡ ಪೀಠ ಷರತ್ತು ಬದ್ಧ ಪೆರೋಲ್ ಪೆರೋಲ್ ಮಂಜೂರು ಮಾಡಿದೆ.
ಹೂಡಿಕೆದಾರರಿಗೆ ನೀಡಬೇಕಾಗಿದ್ದ ಹಣವನ್ನು ವಂಚಿಸಿದ ಆರೋಪದ ಮೇಲೆ ಸಹರಾ ಮುಖ್ಯಸ್ಥ ಸುಬ್ರತೊ ರಾಯ್ ಅವರನ್ನು ಬಂಧಿಸಿ, ತಿಹಾರ್ ಜೈಲಿನಲ್ಲಿಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ