Select Your Language

Notifications

webdunia
webdunia
webdunia
webdunia

ಎಸ್‌ಬಿಐ ಕಾರು ಮತ್ತು ಗೃಹ ಸಾಲದ ಬಡ್ಡಿದರ ಇಳಿಕೆ ...

ಎಸ್‌ಬಿಐ ಕಾರು ಮತ್ತು ಗೃಹ ಸಾಲದ ಬಡ್ಡಿದರ ಇಳಿಕೆ ...
ನವದೆಹಲಿ , ಬುಧವಾರ, 4 ಮೇ 2016 (11:41 IST)
ಮುಂಬೈ: ದೇಶದ ಅತಿ ದೊಡ್ಡ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ),  ಗೃಹ ಮತ್ತು ಕಾರು ಖರೀದಿ ಸಾಲಗಳ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ.
ಪರಿಷ್ಕೃತ ದರ ಈ ತಿಂಗಳ ಆರಂಭದಿಂದಲೇ ಜಾರಿಗೆ ಬಂದಿದ್ದು, ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚವನ್ನು ಆಧರಿಸಿ ನಿಗದಿಪಡಿಸುವ ಕನಿಷ್ಠ ಬಡ್ಡಿ ದರವನ್ನು 9.15 ಪ್ರತಿಶತಕ್ಕೆ ಇಳಿಕೆ ಮಾಡಿದೆ.
 
ಈ ಪರಿಣಾಮ ಗೃಹ ಸಾಲಗಳ ಮೇಲಿನ ಬಡ್ಡಿ ದರ 9.40 ಪ್ರತಿಶತದಷ್ಟಾಗಲಿದ್ದು, ಮಹಿಳಾ ಗ್ರಾಹಕರಿಗೆ 9.35 ಪ್ರತಿಶತದಷ್ಟು ಬಡ್ಡಿದರ ಅನ್ವಯವಾಗಲಿದೆ. ಕಾರು ಖರೀದಿ ಸಾಲದ ಬಡ್ಡಿ ದರ 0.5 ಪ್ರತಿಶತ ಕಡಿಮೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಲವಂತವಾಗಿ ತಬ್ಬಿಕೊಳ್ಳಲು ಕೇಜ್ರಿವಾಲ್ ಸಿನಿಮಾ ನಟಿನಾ!