Select Your Language

Notifications

webdunia
webdunia
webdunia
webdunia

ಗೃಹ ಸಾಲದ ಬಡ್ಡಿ ದರ ಇಳಿಸಿದ ಎಸ್`ಬಿಐ: ದೇಶದಲ್ಲೇ ಅತ್ಯಂತ ಕನಿಷ್ಠ ಬಡ್ಡಿ ದರದಲ್ಲಿ ಗೃಹ ಸಾಲ

sbi
ನವದೆಹಲಿ , ಮಂಗಳವಾರ, 9 ಮೇ 2017 (07:59 IST)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಜನರಿಗೆ ಸಿಹಿ ಸುದ್ದಿ ನೀಡಿದೆ. ಗೃಹಸಾಲದ ಬಡ್ಡಿ ದರದಲ್ಲಿ 0.25ರಷ್ಟು ಇಳಿಕೆ ಮಾಡಿದ್ದು, ದೇಶದಲ್ಲೇ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ನೀಡಲು ಮುಂದಾಗಿದೆ.

ಸಾಲ ಪಡೆಯುವ ಪುರುಷರಿಗೆ ಜುಲೈ 31ರವರೆಗೆ ಈ ಬಡ್ಡಿ ದರ ಇಳಿಕೆ ಸೌಲಭ್ಯ ಸಿಗಲಿದ್ದು, ಶೇ.0.20ರಷ್ಟು ಬಡ್ಡಿ ದರ ಕಡಿತಗೊಂಡು ಶೇ.8.40 ರೂ. ಬಡ್ಡಿ ದರದಲ್ಲಿ ಸಾಲ ಸಿಗಲಿದೆ.  30 ಲಕ್ಷದವರೆಗೆ ಈ ಕನಿಷ್ಠ ಬಡ್ಡಿ ದರ ಅನ್ವಯವಾಗಲಿದೆ.

ಇನ್ನೂ ವೇತನ ವರ್ಗದ ಮಹಿಳಾ ಸಾಲಗಾರರಿಗೆ ಶೇ 0.25ರಷ್ಟು ಮತ್ತು ವೇತನೇತರ ವರ್ಗದ ಮಹಿಳೆಯರಿಗೆ ಶೇ0.20ರಷ್ಟು ಬಡ್ಡಿ ದರ ಕಡಿತದಲ್ಲಿ ಸಾಲ ಸಿಗಲಿದೆ. ಇಂದಿನಿಂದಲೇ ಪರಿಷ್ಕೃತ ಸಾಲದ ಮೇಲಿನ ಬಡ್ಡಿ ದರ ಜಾರಿಗೆ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟಿಟಿಡಿ ಸಿಇಓ ಆಗಿ ಉತ್ತರಭಾರತದ ಅಧಿಕಾರಿ ನೇಮಕ: ಪವನ್ ಕಲ್ಯಾಣ್, ಶಾರದಾ ಪೀಠದ ಶ್ರೀಗಳ ಅಸಮಾಧಾನ