Select Your Language

Notifications

webdunia
webdunia
webdunia
webdunia

ಮಾರುಕಟ್ಟೆಗೆ ಬರುತ್ತಿದೆ ಸ್ಯಾಂಸಂಗ್ ಗೇರ್ ಎಸ್ 3

ಸ್ಯಾಂಸಂಗ್ ಗೇರ್ ಎಸ್ 3
New Delhi , ಗುರುವಾರ, 12 ಜನವರಿ 2017 (10:27 IST)
ಖ್ಯಾತ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪನಿ ಸ್ಯಾಂಸಂಗ್ ತನ್ನ ಹೊಸ ಸ್ಮಾರ್ಟ್‍ವಾಚ್ ಎಸ್ 3ಯನ್ನು ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕ್ಲಾಸಿಕ್, ಫ್ರಂಟಿಯರ್ ಶೈಲಿಗಳಲ್ಲಿ ಲಭ್ಯವಾಗುವ ಈ ವಾಚ್‌ಗಳ ಮುಂಗಡ ಬುಕಿಂಗ್ ಆರಂಭವಾಗಿದೆ. ಈ ತಿಂಗಳ 18ರಿಂದ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಸ್ಯಾಂಸಂಗ್ ಹೇಳಿದೆ. ಇದರ ಬೆಲೆ ರೂ.28,500 ಎಂದು ಕಂಪೆನಿ ನಿರ್ಧರಿಸಿದೆ.
 
ಎರಡೂ ವೇರಿಯಂಟ್‌ಗಳು ಟಜನ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ಮಾಡಲಿವೆ. ಕ್ಲಾಸಿಕ್ ಆವೃತ್ತಿಯಲ್ಲಿ ಬ್ಲೂಟೂತ್, ವೈಫೈ ಸೌಲಭ್ಯ ಇದ್ದರೆ...ಫ್ರಂಟಿಯರ್ ವೇರಿಯಂಟ್‍ನಲ್ಲಿ ಎಲ್‌ಟಿಇ ಸೌಲಭ್ಯವನ್ನು ಹೆಚ್ಚುವರಿಯಾಗಿ ನೀಡಿದ್ದಾರೆ. ಈ ಹಿಂದಿನ ಸ್ಮಾರ್ಟ್‌ವಾಚ್ ಎಸ್ 2ಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದು ಇಂಟರ್‌‍ಫೇಸ್‌ನಲ್ಲಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. 
 
ನೀರು, ಧೂಳು ನಿರೋಧಕವಾಗಿರುವ ಈ ವಾಚ್‌ನಲ್ಲಿ ಮೈಕ್ರೋಫೋನ್ ಜೊತೆಗೆ ಸ್ಪೀಕರ್ ಸೌಲಭ್ಯವನ್ನೂ ಕೊಟ್ಟಿದ್ದಾರೆ. ಇದರಿಂದ ಕರೆಗಳನ್ನು ವಾಚ್ ಮೂಲಕವೆ ಸ್ವೀಕರಿಸುವ ಅವಕಾಶ ಇದೆ. ಒಂದು ವೇಳೆ ಹೊರಗೆ ಹೋದಾಗ ಫೋನ್ ಮನೆಯಲ್ಲಿ ಮರೆತರೆ ವಾಚ್‌ನಲ್ಲಿ ನೋಟಿಫಿಕೇಷನ್ಸ್ ನೋಡಿಕೊಳ್ಳಬಹುದು. ಈಗ ವಾಚ್‌ನಲ್ಲಿರು ವಿಶೇಷತೆಗಳನ್ನು ನೋಡೋಣ ಬನ್ನಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಎಸಗಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ