ಕೊರಿಯಾ ಮೂಲದ ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಸ್ಯಾಮ್‌ಸಂಗ್, 2016 ಆವೃತ್ತಿಯ ಗೆಲಾಕ್ಸಿ ಜಿ-5 ಮತ್ತು ಗೆಲಾಕ್ಸಿ ಜಿ-7 ಸ್ಮಾರ್ಟ್‌ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಕ್ರಮವಾಗಿ 17,000 ಮತ್ತು 21,000 ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ.
ಈ ಎರಡು ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ ವೈಶಿಷ್ಟ್ಯ ಹೊಂದಿದ್ದು, 4ಜಿ ಎಟಿಇ ಕ್ಯಾಟ್ 4 ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ. ಗೆಲಾಕ್ಸಿ ಜಿ-5 ಮತ್ತು ಗೆಲಾಕ್ಸಿ ಜಿ-7 ಸ್ಮಾರ್ಟ್‌ಪೋನ್ ಎಫ್/1.9 ಅಪರ್ಚರ್ ಮತ್ತು ಎಲ್‌ಇಡಿ ಫ್ಲ್ಯಾಶ್ ಜೊತೆಗೆ 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಎಫ್/1.9 ಅಪರ್ಚರ್ ಜೊತೆಗೆ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ಜಿ-5 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 720x1280 ಪಿಕ್ಸೆಲ್ಸ್ ಜೊತೆಗೆ 5.2 ಇಂಚಿನ ಎಚ್‌ಡಿ ಸೂಪರ್ ಅಮೊಲೆಡ್ ಡಿಸ್‌ಪ್ಲೇ, 1.2ಜಿಎಚ್‌ಝಡ್ ಕ್ವಾಡ್ ಕೋರ್ ಪ್ರೊಸೆಸರ್, 3 ಜಿಬಿ ರ್ಯಾಮ್, 3100 ಎಮ್‌ಎಎಚ್ ಬ್ಯಾಟರಿ ಹೊಂದಿದ್ದು, 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಜೊತೆಗೆ 128 ಜಿಬಿ ವಿಸ್ತರಣೆಯ ಸೋರೇಜ್ ಸಾಮರ್ಥ್ಯ ಹೊಂದಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ಜಿ-7 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 720x1280 ಪಿಕ್ಸೆಲ್ಸ್ ಜೊತೆಗೆ 5.5 ಇಂಚಿನ ಎಚ್‌ಡಿ ಸೂಪರ್ ಅಮೊಲೆಡ್ ಡಿಸ್‌ಪ್ಲೇ, 1.6 ಜಿಎಚ್‌ಝಡ್ ಆಕ್ಟಾ ಕೋರ್ ಪ್ರೊಸೆಸರ್, 2 ಜಿಬಿ ರ್ಯಾಮ್, 3300 ಎಮ್‌ಎಎಚ್ ಬ್ಯಾಟರಿ ಹೊಂದಿದ್ದು, 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಜೊತೆಗೆ 128 ಜಿಬಿ ವಿಸ್ತರಣೆಯ ಸೋರೇಜ್ ಸಾಮರ್ಥ್ಯ ಹೊಂದಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ