Select Your Language

Notifications

webdunia
webdunia
webdunia
webdunia

ಮೊಬೈಲ್ ಮಾರಾಟ: ಆಪಲ್ ಕಂಪೆನಿಯನ್ನು ಹಿಂದಕ್ಕೆ ತಳ್ಳಿ ಅಗ್ರಪಟ್ಟಕ್ಕೇರಿದ ಸಾಮ್‌ಸುಂಗ್

ಮೊಬೈಲ್ ಮಾರಾಟ: ಆಪಲ್ ಕಂಪೆನಿಯನ್ನು ಹಿಂದಕ್ಕೆ ತಳ್ಳಿ ಅಗ್ರಪಟ್ಟಕ್ಕೇರಿದ ಸಾಮ್‌ಸುಂಗ್
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2016 (16:27 IST)
ಗೆಲಾಕ್ಸಿ ಎಸ್‌-7 ಆವೃತ್ತಿಯ ಸ್ಸಾರ್ಟ್‌ಪೋನ್‌ಗಳ ಯಶಸ್ವಿ ಬಿಡುಗಡೆ ಮತ್ತು ಬೆಲೆ ಕಡಿತದ ಕೊಡುಗೆಯಿಂದ ಕೊರಿಯಾ ಮೂಲದ ದೈತ್ಯ ಸಾಮ್‌ಸುಂಗ್ ಸಂಸ್ಥೆ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಪ್ರೀಮಿಯಂ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಆಪಲ್‌ ಸಂಸ್ಥೆಯನ್ನು ಮೀರಿಸಿದೆ.
ಕಳೆದ ವರ್ಷದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಆಪಲ್ ಮತ್ತು ಸಾಮ್‌ಸುಂಗ್ ಸಂಸ್ಥೆಗಳು ಭಾರತದ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಯಲ್ಲಿ ತೊಡಗಿದ್ದವು. ಆದರೆ ಕೊರಿಯಾ ಮೂಲದ ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆ,  ಹಿಂದಿನ ಮೂರು ತಿಂಗಳಲ್ಲಿ ಹೆಚ್ಚಿನ ಮೌಲ್ಯದ 30,000 ರೂ.ಗಳಿಗಬ ಮೀರಿದ ಸ್ಮಾರ್ಟ್‌ಪೋನ್ ಮಾರಾಟದ ವಿಬಾಗದಲ್ಲಿ ಕ್ಯುಪರ್ಟಿನೋ ಮೂಲದ ಪ್ರತಿಸ್ಪರ್ಧಿ ಅಪಲ್ ಸಂಸ್ಥೆಯನ್ನು ಮೀರಿಸಿದೆ ಎಂದು ಜಿಎಫ್‌ಕೆ ಮತ್ತು ಕೌಂಟರ್‌ಪಾಯಿಂಟ್ ಸಂಶೋಧನಾ ವರದಿಗಳು ತಿಳಿಸಿವೆ.
 
ಹಾಂಗ್ ಕಾಂಗ್ ಮೂಲದ ಕೌಂಟರ್ಪಾಯಿಂಟ್ ರಿಸರ್ಚ್ ಅಂಕಿಅಂಶಗಳ ಪ್ರಕಾರ, ಸಾಮ್‌ಸುಂಗ್ ಸಂಸ್ಥೆ, ಕಳೆದ ತ್ರೈಮಾಸಿಕದಲ್ಲಿ ಶೇ.35 ರಷ್ಟು ಶೇರುಪಾಲು ಹೊಂದಿದ್ದು, ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ  ಶೇ.62 ರಷ್ಟು ಹೆಚ್ಚಳವಾಗಿದೆ. ಆದರೆ, ಕಳೆದ ತ್ರೈಮಾಸಿಕದಲ್ಲಿ ಶೇ.55 ರಷ್ಟು ಪಾಲು ಹೊಂದಿದ್ದ ಆಪಲ್, ಇದೀಗ ಪ್ರಸಕ್ತ ತ್ರೈಮಾಸಿಕದಲ್ಲಿ ಶೇ. 37 ಕ್ಕೆ ಕುಸಿದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ನಾಯಕತ್ವದ ಬದಲಾವಣೆಯೇ ಇಲ್ಲ: ಸಚಿವ ಮಹಾದೇವಪ್ಪ